ರಾಜ್ಯಕ್ಕೆ ರಾಜ್ಯವೇ ಕೊರೊನಾ ರಣಕೇಕೆಗೆ ಬೆಚ್ಚಿಬಿದ್ದಿದೆ. ಕೊರೊನಾ ಆತಂಕದಿಂದ ಹಲವಾರು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದು, ದೊಡ್ಡ ಪ್ರಮಾಣದ ನಷ್ಟವನ್ನೇ ಅನುಭವಿಸುವಂತಾಗಿದೆ. ಇನ್ನೂ ದಿನೇ ದಿನೇ ಕೊರೊನಾ ಹಾವಳಿ ಮುಂದುವರೆಯುತ್ತಲೇ ಇದ್ದು, ಗಲ್ಲಿ ಗಲ್ಲಿಯರು ಸೋಂಕು ವೇಗವಾಗಿ ವ್ಯಾಪಿಸುತ್ತಿದೆ. ಇದರ ನಡುವೆ ಇನ್ನು ಮುಂದಿನ ದಿನಗಳಲ್ಲಿ ಲಾಕ್ ಡೌನ್ ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ. ಇನ್ನೂ ಮುಖ್ಯವಾಗಿ ಇಷ್ಟು ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಆನ್ ಲೈನ್ ಶಿಕ್ಷಣದ ಮೊರೆ ಹೋಗಲಾಗಿತ್ತು. ಇದೀಗ ಈ ವರ್ಷದ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಒಳಗೆ ರಾಜ್ಯದಲ್ಲಿ ಶಾಲೆಗಳನ್ನು ಪುನಃ ಆರಂಭ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವುದಾಗಿ ಶಿಕ್ಷಣ ಸಚಿವ ಎಸ್ ಸುರೆಶ್ ಕುಮಾರ್ ಅವರು ತಿಳಿಸಿದ್ದಾರೆ. ಆದ್ರೆ ಕೊರೊನಾ ಅಟ್ಟಹಾಸದ ನಡುವೆ ಶಾಲೆಗಳನ್ನು ತೆರೆಯುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಹಾವಳಿ ಹೀಗೇ ಇದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುವ ಸಾಧ್ಯತೆಯಿದೆ.
ವಿಜ್ಞಾನದ ಕಣ್ಣಲ್ಲಿ ವೇದಾಂತದ ದರ್ಶನ: ಜನಮನ ಗೆದ್ದ ‘ದಕ್ಷಿಣಾಸ್ಯ ದರ್ಶಿನಿ’ಗೆ ಅದ್ಧೂರಿ ತೆರೆ
- ವಿಜ್ಞಾನ-ವೇದಾಂತದ ಸಂಗಮಕ್ಕೆ ಸಾಕ್ಷಿಯಾದ ಅರಮನೆ ಮೈದಾನ - ದಕ್ಷಿಣಾಸ್ಯ ದರ್ಶಿನಿ: ಕಣ್ಮನ ಸೆಳೆದ ದ್ವಾರಕಾ ದರ್ಶನ - ಪ್ರಾಚೀನ ಜ್ಞಾನಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ -...








