ಸಂಜೆ ಉಗುರು ಕತ್ತರಿಸಬಾರದು , ಕನ್ನಡಿ ನೋಡ್ಕೋಬಾರದು ಅಂತಾರೆ ಯಾಕೆ ಗೊತ್ತಾ..? ಮೂಡನಂಬಿಕೆಯಲ್ಲ ಆದ್ರೆ ವೈಜ್ಞಾನಿಕ ಕಾರಣಗಳಿವೆ..!
ಸಂಜೆ ಉಗುರು ಕತ್ತರಿಸಬಾರದು, ಮಂಗಳವಾರ , ಶುಕ್ರವಾರ ಉಗರು ಕತ್ತರಿಸಬಾರದು ಕೂದಲು ಕತ್ತರಿಸಬಾರದು, ಸಂಜೆಯಾದ್ಮೇಲೆ ಕನ್ನಡಿ ನೋಡ್ಕೋಬಾರದು, ಕೂದಲಿಗೆ ಬಾಚಣಿಗೆ ಹಾಕಬಾರದು, ಮಕ್ಕಳು ನಿದ್ದೆ ಮಾಡಿದ್ದಾಗ ಅವರಿಗೆ ಅಲಂಕಾರ ಮಾಡಬಾರದು, ಬೆಕ್ಕು ಅಡ್ಡ ಬಂದ್ರೆ ರಸ್ತೆ ದಾಟಬಾರದು, ಬೆಳ್ಳಂ ಬೆಳಿಗ್ಗೆ ಕರಿ ಬೆಕ್ಕು ನೋಡ್ಬಾರದು, ಮುಟ್ಟಾದ್ರೆ ಮಹಿಳೆಯರು ದೇವಸ್ಥಾನಕ್ಕೆ ಹೋಗಬಾರದು, ಅರಳಿ ಮರ, ಆಲದ ಮರದ ಕೆಳಗೆ ಸಂಜೆಯಾದ್ರೆ ಹೋಗಬಾರದು , ಸಂಜೆಯಾದ್ರೆ , ಮಟ ಮಟ ಮಧ್ಯಾಹ್ನ ಮಹಿಳೆಯರು ಕೂದಲು ಬಿಡಬಾರದು , ಸಂಜೆಯಾದ್ರೆ ಗಿಡಗಳಿಗೆ ಕೈಹಾಕಬಾರದು, ಶವಸಂಸ್ಕಾರದ ಬಳಿಕ ಸ್ನಾನ ಮಾಡುವುದು ಹೀಗೆಲ್ಲಾ ಇನ್ನೂ ನೂರಾರು, ಸಾವಿರಾರು ನಂಬಿಕೆಗಳನ್ನ ಬಹಳ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದೇವೆ. ಅದ್ರಲ್ಲೂ ಇಂತಹ ನಂಬಿಕೆಗಳು ಭಾರತದಲ್ಲಿ ಹೆಚ್ಚು.
ಇ೦ದಿನ ದಿನಗಳಲ್ಲಿಯೂ ಸಹ ಮೂಢನಂಬಿಕೆಗಳಕಟ್ಟುಪಾಡಿಗೆ ಬಿದ್ದು, ಆಘಾತಕಾರಿ ಅಥವಾ ಕೆಟ್ಟ ಆಚರಣೆಗಳು ಹಾಗೂ ಸ೦ಪ್ರದಾಯಗಳು ಭಾರತ ದೇಶದಲ್ಲಿ ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇರುತ್ತವೆ. ಆದ್ರೆ ಇಂತಹ ಮೂಡ ನಂಬಿಕೆಗಳು ಹುಟ್ಟಿಕೊಂಡಿದ್ದು ಹೇಗೆ ಕಾರಣ ಏನಿರಬಹುದು..? ಅನ್ನೋದನ್ನ ಯೋಚನೆ ಮಾಡಿದ್ರೆ ನಾನಾ ಉತ್ತರಗಳು ಸಿಗುತ್ತವೆ. ಆದರೆ ಯಾವುದೂ ಸ್ಪಷ್ಟವಾಗಿ ಅಂತಿಮ ಉತ್ತರ ಎಂದೆನಿಸೋದಿಲ್ಲ. ಯಾರ ಅಭಿಪ್ರಾಯವೂ ಒಂದೇ ರೀತಿ ಇರುವುದಿಲ್ಲ. ಆದ್ರೆ ಹಿಂದೆಲ್ಲಾ ಜನರಿಗೆ ಅಷ್ಟಾಗಿ ವೈಜ್ಞಾನಿಕತೆಯ ಅರಿವಿರಲಿಲ್ಲ.. ರೋಗ ರುಜುಣುಗಳನ್ನ ವಾಸಿ ಮಾಡಿಕೊಳ್ಳೋಕೆ , ಅದು ಹೇಗೆ ಬರುತ್ತೆ , ಏನು ಕಾರಣ ಇರಬಹುದು ಎಂಬುದು ಗೊತ್ತಾಗದೇ ತಮಗೆ ತೋಚಿದ್ದನ್ನ ಮಾಡ್ತಿದ್ರು.
ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ನಮ್ಮ ದೈನಂದಿನ ಕಾರ್ಯಗಳಲ್ಲಿ ಕೆಲ ರೂಢಿಗಳನ್ನ ಪಾಲಿಸಿಕೊಮಡು ಬರುತ್ತೇವೆ. ಶುಭ ಅಶುಭಗಳನ್ನ ನೊಡ್ತೇವೆ. ತೆಂಗಿನ ಕಾಯಿ ಹೊಡುದ್ರೆ ಮಧ್ಯಕ್ಕೆ ಹೋಳಾಗಬೇಕು ಇಲ್ಲ ಅಶುಭ, ಒಳ್ಲೆ ಕೆಲಸಕ್ಕೂ ಮುನ್ನ ಬಲಗಡೆಯಿಂದ ಪ್ರಾರಂಭಿಸಬೇಕು. ಬಲಗಾಲಿಡಬೇಕು, ಬಲಗೈಯಿಂದ ವಸ್ತುಗಳನ್ನ ನೀಡಬೇಕು, ಬಲಗಡೆ ಮುಖಮಾಡಿ ಏಳಬೇಕು. ಹೀಗೆಲ್ಲಾ ನಾವು ಈಗಲೂ ರೂಢಿಸಿಕೊಮಡು ಬಂದಿದ್ದೇವೆ. ಕೆಲವು ನಂಬಿಕೆಗಳು ಹಾಸ್ಯಾಸ್ಪದವಾಗಿದ್ರೆ, ಕೆಲವು ನಂಬಿಕೆಗಳ ಪರಿಣಾಮ ಅತ್ಯಂತ ಅಪಾಯಕಾರಿಯಾಗಿರುತ್ತವೆ. ಇನ್ನೂ ಕೆಲವು ಅಸಹ್ಯವಾಗಿರುತ್ತೆ.
ಇನ್ನೂ ಹೋಮ ಹವನ, ಪೂಜೆ ಪುನಸ್ಕಾರ, ಶ್ಲೋಕ – ಭಜನೆ , ಧಾರ್ಮಿಕ ಆಚರಣೆಗಳು ಮಾಡೋದು ಅವರವರ ಧಾರ್ಮಿಕ ನಂಬಿಕೆ. ಅದು ನಿಜ ಸಹ ಆಗಿರಬಹುದು. ಅವರ ಅವರ ಆಚಾರ ವಿಚಾರ , ಅನುಭವ , ನಂಬಿಕೆ. ಅವೆಲ್ಲಾ ತರ್ಕಕ್ಕೆ ನಿಲುಕದ್ದೂ. ಎಷ್ಟೇ ಚರ್ಚೆ, ಸಂವಾದ ನಡೆದರೂ ಕೊನೆಯಲ್ಲಿ ಉಳಿಯೋದು ಪ್ರಶ್ನೆನೆ. ಆದ್ರೆ ನಾವು ಕೇವಲ ವೈಜ್ಞಾನಿಕ ಅಥವ ಬೇರೆ ಕಾರಣಗಳು ಏನಿರಬಹುದು ಎಂಬೋದನ್ನ ನೋಡೋಣ…
ದೇವರು
ಅಂದ್ಹಾಗೆ ನಾವು ಬಹಳ ದುಃಖದಲ್ಲಿದ್ದಾಗ, ಜೀವನವೇ ಬೇಸರವಾದಾಗ, ಯಾರ ಬಳಿಯೂ ನಮ್ಮ ಬೇಸರವನ್ನ ಹಂಚಿಕೊಳ್ಳು ಆಗದೇ ಜಿಗುಪ್ಸೆಗೆ ಒಳಗಾದಾಗ ದೇವರ ಮೊರೆ ಹೋಗ್ತೇವೆ. ದೇವರ ಬಳಿ ಕಷ್ಟಗಳನ್ನ ಹೇಳಿಕೊಳ್ತೇವೆ. ಹಾಗಂತ ದೇವರು ಬಂದು ಎಲ್ಲಾ ಸಮಸ್ಯೆಗಳನ್ನ ಪರಿಹರಿಸ್ತಾನೆ ಅಂತಲ್ಲಾ. ನಮಗೆ ಯಾರ ಬಳಿಯೂ ನೋವನ್ನ ಹಂಚಿಕೊಳ್ಳಲು ಆಗದೇ ಇರೋ ಸಂದರ್ಭದಲ್ಲಿ ನಮ್ಮ ಆತ್ಮಸ್ಥೈರ್ಯ ಕುಂದಬಾರದು, ಧೈರ್ಯ ಸಿಗಬೇಕು, ಒಂದು ಪಾಸಿಟಿವ್ ವೈಬ್ ಅಂದ್ರೆ ಸಕಾರಾತ್ಮಕ ಚಿಂತನೆ ಸಿಗಬೇಕು. ಇದಾದ ಪಕ್ಷದಲ್ಲಿ ನಾವು ಏನೋ ಒಂದು ಮಾಡಬಹುದು, ಒಳ್ಳೆಯದಾಗುತ್ತೆ ಅನ್ನೋ ಭಾವನೆ ಬೆಳೆಸಿಕೊಳ್ತೇವೆ. ದೇವರಿದ್ದಾನೆ ಸರಿ ಹೋಗುತ್ತೆ ಅನ್ನೋ ಧೈರ್ಯ ತಂದುಕೊಂಡು ನಮ್ಮನ್ನ ನಾವು ಸಮಾಧಾನ ಮಾಡಿಕೊಳ್ತೇವೆ. ಆಗ ಬೇಸರವೂ ಕಡಿಮೆಯಾಗುತ್ತೆ. ದುಃಖವೂ ತಗ್ಗುತ್ತೆ. ಮತ್ತೊಂದು ಕಾರಣ ನಮಗೆ ದೇವಸ್ಥಾನದಲ್ಲಿ ಸಿಗುವ ನೆಮ್ಮದಿ ಪ್ರಶಾಂತತೆ ಬೇರೆಲ್ಲೂ ಸಿಗುವುದಿಲ್ಲ. ಆಗ ಆಲೋಚನೆ ಮಾಡಿ ನಮ್ಮ ಸಮ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವ ಅವಕಾಶವೂ ಸಿಗುತ್ತೆ. ದೇವಾಲದ ವಾತಾವರಣ ನೆಮ್ಮದಿಯೂ ನೀಡುತ್ತೆ. ಹೀಗಾಗಿ ದೇವಾಲಯಗಳಿಗೆ ಹೋಗ್ತಾರೆ. ಮನಸನ್ನ ಹಗುರ ಮಾಡಿಕೊಳ್ತಾರೆ.
ಮತ್ತೆ ದೇವರ ಹೆಸರು ಹೇಳಿದರೆ ಜನರು ಭಯಪಟ್ಟು ಕೆಟ್ಟ ಕೆಲಸ ಅಥವ ನಕಾರಾತ್ಮಕ ಯೋಚನೆಗಳಿಂದ ದೂರ ಉಳಿಯುತ್ತಾರೆ. ಏನೋ ತಪ್ಪು ಮಾಡೋ ಮುನ್ನ ದೇವರು ನೋಡುತ್ತಾನೆ. ಶಾಪ ಕೊಡ್ತಾನೆ ಹೀಗೆ ಆಲೋಚಿಸಿ ಕೆಲವೊಮ್ಮೆ ಅಂತಹ ಕೆಲಸಗಳಿಗೆ ಕೈ ಹಾಕೋದಿಲ್ಲ. ಹೀಗಾಗಿ ನಮ್ಮ ಪೂರ್ವಜರು ದೇವರಹೆಸರಲ್ಲಿ ಶಿಕ್ಷಣ ನೀಡ್ತಿದ್ರು ಅಂತ ಸಹ ನಾವು ಹೇಳಬಹುದು.
ಮುಟ್ಟಾದ ಸಂದರ್ಭದಲ್ಲಿ ದೇವಾಲಯಕ್ಕೆ ಹೋಗಬಾರದು
ವೈಜ್ಞಾನಿಕವಾಗಿ ನೋಡೋದಾದ್ರೆ ಹಿಂದೆಲ್ಲಾ ಈಗಿನಷ್ಟು ಸಂಚಾರಕ್ಕೆ ಸುಗಮವಾದ ರಸ್ತೆಗಳಾಗಲಿ ವಾಹನಗಳಾಗಲಿ ಇರಲಿಲ್ಲ. ತಂತ್ರಜ್ಞಾನ ಅಷ್ಟಾಗಿ ಮುಂದುವರೆದಿರಲಿಲ್ಲ. ಆಗೆಲ್ಲಾ ದೇವಾಲಯಗಳಿಗೆ ಹೋಗಬೇಕಾದ್ರೆ ಮೈಲಿಗಟ್ಟಲೆ ನಡೆಯಬೇಕಿತ್ತು. ಆದ್ರೆ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಅಷ್ಟೆಲ್ಲಾ ಕಷ್ಟಪಟ್ಟು ನಡೆಯುವುದಕ್ಕೆ , ಕೆಲಸ ಮಾಡುವುದಕ್ಕೆ ಶಕ್ತಿ ಇರುವುದಿಲ್ಲ. ಆ ಸಮಯದಲ್ಲಿ ದೈಹಿಕವಾಗಿಯೂ ದುರ್ಬಲರಾಗಿರ್ತಾರೆ ಮಾನಸಿಕವಾಗಿಯೂ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಹೀಗಾಗಿಯೇ ಅವರಿಗೆ ವಿಶ್ರಾಂತಿ ನೀಡಲು ದೇವಾಲಯಗಳಿಗೆ ಹೋಗಬಾರದು, ಮನೆಯಲ್ಲಿ ಒಂದು ಮೂಲೆಯಲ್ಲಿರಬೇಕು, ಪೂಜೆ ಕೆಲಸ ಮಾಡಬಾರದು ಎಂದು ಪೂರ್ವಜರು ದೇವರ ಹೆಸರಲ್ಲಿಕಟ್ಟುಪಾಡುಗಳನ್ನ ತಂದರು. ಆದ್ರೆ ಇದು ಕ್ರಮೇಣ ಮಡಿ ಮೈಲಿಗೆಯ ರೂಪ ಪಡೆದುಕೊಳ್ತು.
ತುಳಸಿ ಗಿಡಕ್ಕೆ ಸಂಜೆ ಕೈ ಹಾಕಬಾರದು
ಈ ವಿಚಾರಕ್ಕೆ ನಾನಾ ತರ್ಕಗಳು ಕಾರಣಗಳಿವೆ. ಆದ್ರೆ ವೈದ್ಯಕೀಯವಾಗಿ ನೋಡೋದಾದ್ರೆ ತುಳಸಿಯಲ್ಲಿ ಔಷಧೀಯ ಗುಣ ಸಮೃದ್ಧವಾಗಿರುತ್ತೆ. ಇದು ಒಂದು ಕಾರಣ ಪ್ರತಿ ಮನೆಯ ಮುಂದೆ ತುಳಸಿ ಇರುತ್ತೆ. ಆದ್ರೆ ಸಂಜೆ ವೇಳೆ ಔಷಧೀಯ ಗುಣ ಕ್ಷೀಣಿಸಿರುತ್ತೆ. ಇದು ಒಂದು ಕಾರಣ
ಸಂಜೆ ಗಿಡಗಳಿಗೆ ಕೈ ಹಾಕಬಾರದು
ಸಂಜೆ ಹೊತ್ತಿನಲ್ಲಿ ಗಿಡಗಳು ಮರಗಳ ಬಳಿ ಹೋಗಬಾರದು ಅನ್ನೋದಕ್ಕೆ ಕಾರಣ ಅಂದ್ರೆ ಆ ಹೊತ್ತಿನಲ್ಲಿ ಮರ ಗಿಡಗಳ ಬಳಿ ಹುಳ ಹಪ್ಪಟೆಗಳು, ಹಾವು ಚೇಳುಗಳು ಇದ್ದರೆ ಕತ್ತಲಲ್ಲಿ ಕಾಣಿಸೋದಿಲ್ಲ. ಉದಾಹರಣೆಗೆ ಹಸಿರು ಹಾವು ಗಿಡದಲ್ಲಿದ್ದರೂ ನಮಗೆ ಗೊತ್ತಾಗೋದಿಲ್ಲ. ಅದು ನೋಡೋದಕ್ಕೆ ಹಸಿರು ಬಳ್ಳಿಯಂತೆಯೇ ಇರುತ್ತೆ. ಇಂತಹ ಕಾರಣಗಳಿಂದಾಗಿ ಯಾರಿಗೂ ಅಪಾಯವಾಗಬಾರದು ಎಂಬ ಕಾರಣದಿಂದಲೇ ಆಗೆಲ್ಲಾ ಸಂಜೆಯಾದ್ಮೇಲೆ ಗಿಡಗಳಿಗೆ ಕೈಹಾಕಬಾರದು ಎಂದು ಹೇಳ್ತಿದ್ರು ಪೂರ್ವಜರು. ಆದ್ರೆ ಇದಕ್ಕೆ ಬೇರೆ ಬೇರೆ ಕಾರಣಗಳೂ ಸಹ ಇರಬಹುದು.
ಅರಳಿ ಮರ ಭೂತಗಳ ನಿವಾಸ..!
ಅರಳಿ ಮರದಲ್ಲಿ ಭೂತ ಪ್ರೇತಗಳ ವಾಸಸ್ಥಾನವೆಂಬ ನಂಬಿಕೆ ಈಗಲೂ ಇದೆ. ಸಂಜೆ ಹೊತ್ತು ಆ ಮರದ ಕೆಲಗೆ ಹೋಗಬಾರದು ಎಂಬ ಮೂಡನಂಬಿಕೆ ಇದೆ. ಆದ್ರೆ ಇದರ ನಿಜವಾದ ಕಾರಣ ಈ ಮರವು ರಾತ್ರಿ ವೇಳೆ ಇಂಗಾಲದ ಆಮ್ಲ (Carbon Di Oxide) ಹೊರ ಸೂಸುತ್ತೆ. ಇದು ಮಾನವನ ಆರೋಗ್ಯಕ್ಕೆ ಹಾನಿಕಾರಕ ಹೀಗಾಗಿಯೇ ಮರದ ಕೆಳಗೆ ನಿಂತರೂ ಅಥವಾ ಮಲಗಿದರೂ ಸಾಕಷ್ಟು ಅಪಾಯಕಾರಿ.. ಹೀಗಾಗಿ ಈ ಮರದಿಂದ ದೂರವಿಡಲು ಪೂರ್ವಜರು ಭೂತ ಪ್ರೇತದ ಕಥೆ ಕಟ್ಟಿದರು. ಇಲ್ಲ ಮತ್ತೊಂದು ಕಾರಣ ಆಗೆಲ್ಲಾ ವಿಜ್ಞಾನ ದುರ್ಬಲವಾಗಿತ್ತು. ಸರಿಯಾಗಿ ಕಾರಣ ತಿಳಿಯದೇ ಮರದ ಕೆಳಗೆ ಮಲಗಿದಾಗ ಅಪಾಯಗಳಾಗ್ತಿದ್ದ ಹಿನ್ನೆಲೆ ಇಲ್ಲೇನೋ ಇದೆ. ಅದೇ ಹೀಗೆಲ್ಲಾ ಮಾಡ್ತಿರೊದು ಅನ್ನೋ ನಂಬಿಕೆ ಬೆಲಸಿಕೊಂಡು ಕ್ರಮೇಣ ಅದು ಆಚರಣೆಯೇ ಆಯಿತು.
ಸಂಜೆ ಕೂದಲು ಬಾಚಬಾರದು, ಉಗುರು ಕತ್ತರಿಸಬಾರದು
ಅಂದ್ಹಾಗೆ ನಾವೆಲ್ಲಾ ಕೆಳೇ ಇರುತ್ತೇವೆ. ಸಂಜೆ ಕೂದಲು ಬಾಚಿದ್ರೆ ದರಿದ್ರ ಉಗುರು ಕತ್ತರಿಸಿದ್ರೆ ದರಿದ್ರ ಅಂತ . ಆದ್ರೆ ವೈಜ್ಞಾನಿಕ ಕಾರಣ ಅಂದ್ರೆ ಹಿಂದೆಲ್ಲಾ ಲೈಟ್ ಗಳು ಇರುತ್ತಿರಲಿಲ್ಲ. ಎಣ್ಣೆ ದೀಪಗಳಿಂದ ಅಷ್ಟು ಪ್ರಕಾಶಮಾನ ಬೆಳಕು ಕಾಣಿಸುತ್ತಿರಲಿಲ್ಲ. ಹೀಗಾಗಿ ಉಗುರು ಕತ್ತರಿಸಿದ್ರೆ, ಅಪ್ಪಿತಪ್ಪಿ ನೆಲಕ್ಕೆ ಬಿದ್ರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಕೂದಲು ಬಾಚಿದರು ಅಷ್ಟೇ. ಹೀಗೆ ಕೆಳಗೆ ಬವೀಳುತ್ತಿದ್ದ ಕೂದಲು , ಉಗುರು ಅಪ್ಪಿ ತಪ್ಪಿ ಊಟದ ಜೊತೆ ಸೇರಿ ತಮ್ಮ ದೇಹ ಸೇರಿದ್ರೆ ಅದು ಆರೋಗ್ಯಕ್ಕೆ ಅಪಾಯವಾಗುತ್ತಿತ್ತು. ಹೀಗಾಗಿಯೇ ದರಿದ್ರದ ಹೆಸರು ಕೊಟ್ಟು ಜನರಲ್ಲಿ ಭಯ ಹುಟ್ಟಿಸಿ , ಈ ಮೂಲಕ ಶಿಸ್ತು ಬೆಳೆಸುವ ಪ್ರಯತ್ನಮಾಡಿದ್ರು ಪೂರ್ವಜರು.
ಸಂಜೆ ಕನ್ನಡಿ ನೋಡಬಾರದು, ರಾತ್ರಿ ಕಸ ಎಸೆಯಬಾರದು
ಸಂಜೆ ಕನ್ನಡಿ ನೊಡಿದ್ರೆ ದೆವ್ವ ಮೈಮೇಲೆ ಬರುತ್ತೆ ಅನ್ನೋ ಮೂಡ ನಂಬಿಕೆಯಿದೆ. ಆದ್ರೆ ವೈಜ್ಞಾನಿಕವಾಗಿ ಹಿಂದಿನ ಕಾಲದಲ್ಲಿ ಬೆಳಕು ಅಷ್ಆಗಿ ಇರುತ್ತಿರಲಿಲ್ಲ. ಕತ್ತಲಲ್ಲಿ ಕನ್ನಡಿಯಲ್ಲಿ ನಮ್ಮ ಮುಖ ಭಯಾನಕವಾಗಿ ವಿರೂಪವಾಗಿ ಕಾಣುತ್ತಿತ್ತು. ಆಗ ನಮ್ಮೊಳಗೆ ಒಂದು ನಕಾರಾತ್ಮಕ ಬಾವನೆ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಿದ್ವು. ಹೀಗಾಗಿಯೇ ಕನ್ನಡಿ ನೋಡಬಾರದು ಅಂತ ಹೇಳುತ್ತಿದ್ದರು. ಇದು ಇದೀಗ ಒಂದು ಪ್ರಬಲ ಮೂಡನಂಬಿಕೆಯಾಗಿದೆ.
ರಾತ್ರಿ ಕಸ ಎಸೆಯಬಾರದು ಅನ್ನೋದಕ್ಕೆ ಕಾರಣ ಏನೆಂದ್ರೆ ಆಗಿನ ಕಾಲದಲ್ಲಿ ಹೊರಗಡೆ ಬೀದಿ ದೀಪಗಳಿರುತ್ತಿರಲಿಲ್ಲ. ಕಾಡು ಹೆಚ್ಚಾಗಿತ್ತು. ಕತ್ತಲಾದ್ರೆ ಕಾಡು ಪ್ರಾಣಿಗಳ ಓಡಾಟ ಹೆಚ್ಚಿರುತ್ತಿತ್ತು. ಹಾವು ಚೇಳುಗಳಂತಹ ವಿಷಕಾರಿ ಸರಿಸೃಪಗಳ ಆತಂಕವೂ ಇತ್ತು. ಕತ್ತಲ್ಲಲ್ಲಿ ಏನೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಇದೇ ಕಾರಣ ಆ ಸಮಯದಲ್ಲಿ ಸಮಯದಲ್ಲಿ ಕಸ ಬಿಸಾಡಲು ಆಚೆ ಹೋದ್ರೆ ಅಪಾಯಕಾರಿ ಎಂಬ ಕಾರಣಕ್ಕೆ ಈ ಕಟ್ಟುಪಾಡು ಕುಟ್ಟಿಕೊಳ್ತು. ಕ್ರಮೆಣ ಅದು ಮೂಡನಂಬಿಕೆಯಾಗಿ ಸಂಜೆ ಕಸ ಬಿಸಾಡಿದ್ರೆ ದರಿದ್ರ ಎಂಬ ನಂಬಿಕೆ ಶುರುವಾಯ್ತು. ಜಗತ್ತಿನಲ್ಲಿ , ಭಾರತದಲ್ಲಿ ಇರುವ ಸಹಸ್ರಾರು ಮೂಡನಂಬಿಕೆಗಳಲ್ಲಿ ಇವು ಬೆರಳೆಣಿಯಷ್ಟು ಮಾತ್ರ.
ಮೂಢನಂಬಿಕೆಗಳು ಎಲ್ಲ ಕಾಲದ ಎಲ್ಲ ದೇಶದಗಳಲ್ಲೂ ಇವೆ. ಆದ್ರೆ ಭಾರತೀಯರಿಗೆ ಮಾತ್ರ ಮೂಢನಂಬಿಕೆ ಹೆಚ್ಚೆಂದೂ ವಾದಿಸುವವರು, ಭಾರತೀಯರು ಮೂಢನಂಬಿಕೆಗಳಿಂದಲೇ ಹಿಂದೆ ಉಳಿದಿದ್ದಾರೆ ಎಂಬುವವರು ಹೆಚ್ಚು. ಆದ್ರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನ ಈ ದಿನ ನಾವೆಲ್ಲರೂ ವಿಚಾರ ಮಾಡಬೇಕು, ಪ್ರಶ್ನೆ ಮಾಡಬೇಕು. ಯಾಕಂದ್ರೆ ಇಡೀ ವಿಶ್ವಾದ್ಯಂತ ಎಲ್ಲರು ತಮ್ಮ ದಿನಂಪ್ರತಿ ಜೀವನದಲ್ಲಿ ತಮಗೇ ಗೊತ್ತಿಲ್ಲದೇ ಕೆಲ ರೂಢಿಗಳನ್ನ ಪಾಲಿಸಿಕೊಮಡು ಬರುತ್ತಿದ್ದು, ಅವೆಲ್ಲವೂ ಮೂಡನಂಬಿಕೆಯ ಲಿಸ್ಟ್ ಗೆ ಸೇರಿಕೊಳ್ತಾವೆ.