ಧಾರವಾಡ : ವಿದ್ಯಾನಗರಿ ಧಾರವಾಡ ಜಿಲ್ಲಾಡಳಿತ ಇಂದು ಹುಬ್ಬಳಿಯ ಮಿಲ್ಲತ್ ನಗರವನ್ನು ಸೀಲ್ ಡೌನ್ ಮಾಡಿ ಆದೇಶ ಹೊರಡಿಸಿದೆ. ಕೋವಿಡ್ -19 ಪಾಸಿಟಿವ್ ಬಂದ್ ಹಿನ್ನೆಲೆ ಏರಿಯಾ ಸೀಲ್ ಡೌನ್ ಮಾಡಿ ಆದೇಶ ಹೊರಡಿಸಿದೆ. ಧಾರವಾಡ ಜಿಲ್ಲೆಯಲ್ಲಿ ನಿನ್ನೆ ಮತ್ತೆರಡು ಕರೋನ ಪಾಸಿಟಿವ್ ಪ್ರಕರಣ ಹಿನ್ನೆಲೆ ಪಾಸಿಟಿವ್ ಬಂದ ವ್ಯಕ್ತಿಯ ಮನೆಯಿಂದ 1 ಕಿ. ಮೀ ಪ್ರದೇಶ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಮಿಲ್ಲತ್ ನಗರದ 1 ಕಿ.ಮೀ ಪ್ರದೇಶ ಸೀಲ್ ಡೌನ್ ಹಾಗೂ 5 ಕಿ.ಮೀ ಪ್ರದೇಶವನ್ನ ಬಫರ್ ಜೋನ್ ಘೋಷಣೆ ಮಾಡಲಾಗಿದೆ. ಸೀಲ್ ಡೌನ್ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಸೀಲ್ ಡೌನ್ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ.








