ನವದೆಹಲಿ: ಎರಡು ರಾಜ್ಯಗಳಲ್ಲಿ ಮೂರು ಜ್ಯೋತಿರ್ಲಿಂಗಗಳನ್ನು ಸಂಪರ್ಕಿಸುವ ಕಾಶಿ ‘ಮಹಾಕಾಲ್ ಎಕ್ಸ್ಪ್ರೆಸ್’ ರೈಲಿನಲ್ಲಿ ಇದೇ ಮೊದಲ ಬಾರಿಗೆ ಶಿವನಿಗಾಗಿ ಸೀಟನ್ನು ಕಾಯ್ದಿರಿಸಲಾಗಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಈ ರೈಲಿಗೆ ಚಾಲನೆ ನೀಡಿದ್ದಾರೆ.
ಲಖನೌ- ನವದೆಹಲಿ ನಡುವಿನ ತೇಜಸ್ ಮತ್ತು ಅಹ್ಮದಾಬಾದ್ – ಮುಂಬೈ ನಡುವಿನ ತೇಜಸ್ ಬಳಿಕ ಐಆರ್ಸಿಟಿಸಿ ನಿರ್ವಹಣೆಯ ಮೂರನೇ ಖಾಸಗಿ ರೈಲು ಇದಾಗಿದ್ದು, ಉತ್ತರ ಪ್ರದೇಶದ ವಾರಣಾಸಿಯಿಂದ ಮಧ್ಯಪ್ರದೇಶದ ಇಂದೋರ್ವರೆಗೆ ಚಲಿಸಲಿದೆ.
ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಿ5 ಬೋಗಿಯಲ್ಲಿ 64ನೇ ಸೀಟನ್ನು ಶಿವನಿಗಾಗಿ ಕಾಯ್ದಿರಿಸಲಾಗಿದೆ ಮತ್ತು ಅದನ್ನು ಖಾಲಿ ಉಳಿಸಲಾಗಿದೆ’.
ವಾರಣಾಸಿಯಿಂದ ಇಂದೋರ್ಗೆ ವಾರದಲ್ಲಿ ಮೂರು ದಿನ ಚಲಿಸುವ 3-ಎಸಿ ರೈಲಿನಲ್ಲಿ ಲಘು ಭಕ್ತಿ ಸಂಗೀತ, ಪ್ರತಿ ಕೋಚ್ನಲ್ಲಿ ಮೀಸಲಾದ ಇಬ್ಬರು ಖಾಸಗಿ ಗಾರ್ಡ್ಗಳು ಮತ್ತು ಸಸ್ಯಾಹಾರಿ ಊಟ ಈ ರೈಲಿನ ಕೆಲವು ವೈಶಿಷ್ಟ್ಯಗಳಾಗಿವೆ.
ವಿಶ್ವಕ್ಕೇ ಮಾದರಿಯಾದ ವಿಶ್ವಗುರು – ಗುದ್ದು ನೀಡುವ ಬದಲು ಮದ್ದು ನೀಡಿದ ಭಾರತ: ಇರಾನ್ ಜತೆಗಿನ ದೋಸ್ತಿಗೆ ಹೊಸ ಭಾಷ್ಯ ಬರೆದ ನವದೆಹಲಿ
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿದೆ. ಕ್ಷಿಪಣಿಗಳು ಮತ್ತು ಬಾಂಬ್ಗಳ ಸದ್ದಿನ ನಡುವೆ ಭಾರತ ಮಾತ್ರ ಶಾಂತಿಯ...








