ಡಿಸೆಂಬರ್ 14 ರಂದು ಸಂಭವಿಸಲಿದೆ ಈ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ
ಮಂಗಳೂರು, ಡಿಸೆಂಬರ್09: 2020 ರ ಎರಡನೇ ಮತ್ತು ಅಂತಿಮ ಸೂರ್ಯಗ್ರಹಣವು ಡಿಸೆಂಬರ್ 14 ರಂದು ಸಂಭವಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಭಾಗಶಃ ಅಥವಾ ಸಂಪೂರ್ಣವಾಗಿ ಬಂದಾಗ ಸೂರ್ಯ ಗ್ರಹಣವು ಸಂಭವಿಸುತ್ತದೆ.

ವರ್ಷದ ಈ ಕೊನೆಯ ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಗಳು ಇಲ್ಲಿದೆ.
ಈ ವರ್ಷದ ಮೊದಲ ಸೂರ್ಯಗ್ರಹಣವು 2020 ರ ಜೂನ್‌ನಲ್ಲಿ ಸಂಭವಿಸಿದೆ. ಈ ಸೂರ್ಯಗ್ರಹಣವು 21 ಜೂನ್ 2020 ರಂದು ಸಂಭವಿಸಿದೆ. 2020 ರಲ್ಲಿ ಒಟ್ಟು 6 ಗ್ರಹಣಗಳು ಸಂಭವಿಸಿದ್ದು, ಇದರಲ್ಲಿ 2 ಸೂರ್ಯಗ್ರಹಣ ಮತ್ತು 4 ಚಂದ್ರ ಗ್ರಹಣಗಳಿವೆ.
ಈ ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 14, 2020 ರಂದು ಪ್ರಾರಂಭವಾಗಿ, ಡಿಸೆಂಬರ್ 15ಕ್ಕೆ ಮುಕ್ತಾಯವಾಗುತ್ತದೆ.
14 ಡಿಸೆಂಬರ್ 2020 ರಂದು ಸೂರ್ಯ ಗ್ರಹಣ ಪ್ರಾರಂಭ ಸಮಯ – ಸಂಜೆ 7 ಗಂಟೆ 3 ನಿಮಿಷ
15 ಡಿಸೆಂಬರ್ 2020 ರ ರಾತ್ರಿ 12:23 ಕ್ಕೆ ಸೂರ್ಯಗ್ರಹಣ ಮುಕ್ತಾಯಗೊಳ್ಳಲಿದೆ.

ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಇದು ಭಾರತದಲ್ಲಿ ಅನ್ವಯಿಸುವುದಿಲ್ಲ. ಈ ಸೂರ್ಯಗ್ರಹಣವು ಆಫ್ರಿಕಾ ಖಂಡದ ದಕ್ಷಿಣ ಭಾಗ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಕ್ಟಿಕಾದಲ್ಲಿ ಗೋಚರಿಸುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1336360172843749377?s=19
10 ಮತ್ತು 12 ತರಗತಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ಮೇ 2021ರಲ್ಲಿ ನಡೆಸಲು ಪೋಷಕರ ಸಂಘಟನೆ ಆಗ್ರಹhttps://t.co/1CSV1aOgIX
— Saaksha TV (@SaakshaTv) December 8, 2020








