ನಿನ್ನೆಯಷ್ಟೆ ವಿಶೇಷ ವಿಮಾನದಲ್ಲಿ ಕುಟುಂಬ ಸಮೇತ ಭಾರತಕ್ಕೆ ಆಗಮಿಸಿರುವ ಟ್ರಂಪ್, ಇಂದು ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಲಿದ್ದಾರೆ. ಟ್ರಂಪ್ ಅವರ ಇಂದಿನ ಕಾರ್ಯಕ್ರಮಗಳ ವಿವರ ನೋಡುವುದಾದರೆ.
ಬೆಳಗ್ಗೆ 10.00ಕ್ಕೆ: ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಭಾಗಿ..
ಬೆಳಗ್ಗೆ 10.30ಕ್ಕೆ: ರಾಜ್‍ಘಾಟ್‍ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಮರ್ಪಣೆ..
ಬೆಳಗ್ಗೆ 11.00ಕ್ಕೆ: ಹೈದರಾಬಾದ್ ಸದನದಲ್ಲಿ ಪ್ರಧಾನಿ ಮೋದಿ ಜೊತೆ ನಿಯೋಗ ಸಭೆ ಹಾಗೂ ಪಿಎಂ ಮೋದಿಯವರೊಂದಿಗೆ ಮಧ್ಯಾಹ್ನದ ಭೋಜನ
ಮಧ್ಯಾಹ್ನ 12.40ಕ್ಕೆ: ಪತ್ರಿಕಾಗೋಷ್ಠಿ, ನಂತರ ಟ್ರಂಪ್ ಅಮೆರಿಕದ ರಾಯಭಾರ ಕಚೇರಿಗೆ ಭೇಟಿ..
ಸಂಜೆ 7.30ಕ್ಕೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭೇಟಿ, ರಾಷ್ಟ್ರಪತಿಯವರ ಭೋಜನಕೂಟದಲ್ಲಿ ಭಾಗಿ
ರಾತ್ರಿ 10ಕ್ಕೆ: ಅಮೆರಿಕಕ್ಕೆ ವಾಪಸ್ ಆಗಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ದ್ ಟ್ರಂಪ್








