ವೈದ್ಯಲೋಕವನ್ನ ದಾರಿ ತಪ್ಪಿಸುತ್ತಿದೆ ಕೊರೊನಾ corona ಎರಡನೇ ಅಲೆ
ಬೆಂಗಳೂರು : ನಮ್ಮ ದೇಶದಲ್ಲಿ ಕೊರೊನಾ ಎರಡನೇ ಅಲೆಯ ಸ್ವಭಾವ ವೈದ್ಯಕೀಯ ಕ್ಷೇತ್ರವನ್ನೇ ದಾರಿ ತಪ್ಪಿಸುತ್ತಿದೆ.
ಇದೇ ಕಾರಣಕ್ಕಾಗಿ ನಮ್ಮಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ಎರಡನೇ ಅಲೆಯ ಸ್ವಭಾವ ಒಂದೇ, ನಮ್ಮಲ್ಲಿ ಮಾತ್ರ ಸ್ವಭಾವ ಬೇರೆ ಇದೆ. ಇದು ಹೊಸ ರೂಪದ ವೈರಾಣು ಎಂದರು.
ಇನ್ನು ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ. ಇಲ್ಲಿಯ ತನಕ ಹಾಸಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಲಿದೆ.
ಹೀಗಾಗಿ, ಸಿಎಂ ಕೂಡ ಆಕ್ಸಿಜನ್ ಒದಗಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಸದ್ಯ, ಯುದ್ಧದ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲರೂ ಸಹಕರಿಸಿ ಹೋರಾಡಬೇಕಿದೆ ಎಂದು ಮನವಿ ಮಾಡಿಕೊಂಡರು.









