ಬೆಂಗಳೂರು: ಅಂತೂ ಇಂತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಶೇ.69.20ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಪಿಯುಸಿ ಫಲಿತಾಂಶ ಪ್ರಕಟಿಸಿದರು. ಕಳೆದ ವರ್ಷ ಶೇ.68.68ರಷ್ಟು ಫಲಿತಾಂಶ ಬಂದಿದ್ದರೆ, ಈ ವರ್ಷ ಶೇ.69.20ರಷ್ಟು ಬಂದಿದ್ದು ಕೇವಲ ಶೇ.1ರಷ್ಟು ಹೆಚ್ಚಳ ಕಂಡು ಬಂದಿದೆ.
ಪ್ರತಿವರ್ಷದಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಈ ವರ್ಷ6.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 3 ಲಕ್ಷದ 84 ಸಾವಿರದ 847 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಇವರಲ್ಲಿ ಶೇ. 68.73 ಬಾಲಕಿಯರು, ಶೇ.54.77 ಬಾಲಕರು ತೇರ್ಗಡೆ ಹೊಂದಿದ್ದಾರೆ.
ಸಚಿವ ಸುರೇಶ್‍ಕುಮಾರ್ ಅವರು ಅಧಿಕೃತವಾಗಿ ಫಲಿತಾಂಶ ಪ್ರಕಟಿಸುವ ಮುನ್ನವೇ ಪಿಯು ಬೋರ್ಡ್ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಿತ್ತು. ಮನೆಯಿಂದಲೇ ವಿದ್ಯಾರ್ಥಿಗಳು ಮೊಬೈಲ್‍ನಲ್ಲಿ ಫಲಿತಾಂಶ ನೋಡಿದ್ದಾರೆ. ವೆಬ್‍ಸೈಟ್‍ನಲ್ಲಿ ಫಲಿತಾಂಶದ ಜತೆಗೆ ವಿದ್ಯಾರ್ಥಿಗಳ ಮೊಬೈಲ್‍ಗೂ ಎಸ್‍ಎಂಎಸ್ ಮೂಲಕ ಫಲಿತಾಂಶ ರವಾನೆ ಮಾಡಲಾಗಿದೆ ಎಂದು ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಯಾವ ವಿಭಾಗ ಎಷ್ಟೆಷ್ಟು ಫಲಿತಾಂಶ..
ವಿಜ್ಞಾನ ವಿಭಾಗ : ಶೇ.76.2
ವಾಣಿಜ್ಯ ವಿಭಾಗ: ಶೇ.65. 52
ಕಲಾ ವಿಭಾಗ :ಶೇ.41.27
ಉಡುಪಿಗೆ ಮೊದಲ ಸ್ಥಾನ-ಶೇ.90.71ರಷ್ಟು ಫಲಿತಾಂಶ
ದಕ್ಷಿಣ ಕನ್ನಡ-ಶೇ.09.71 ಎರಡನೇ ಸ್ಥಾನ
ಕೊಡಗು-81.53ಮೂರನೇ ಸ್ಥಾನ
ವಿಜಯಪುರ ಜಿಲ್ಲೆ- ಕೊನೆ ಸ್ಥಾನ
257 ವಿದ್ಯಾರ್ಥಿಗಳು ಕನ್ನಡದಲ್ಲಿ 100ಕ್ಕೆ 100 ಅಂಕ
ಉಡುಪಿಯ ಕಾರ್ಕಳದ ಸರ್ಕಾರಿ ಕಾಲೇಜು: ಶೇ.100ರಷ್ಟು ಫಲಿತಾಂಶ
ಕೆಳಕಂಡ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ..