ದ್ವಿತೀಯ ಪಿಯುಸಿ ಫಲಿತಾಂಶ : 600ಕ್ಕೆ 600 ಅಂಕ ಪಡೆದ 2,239 ವಿದ್ಯಾರ್ಥಿಗಳು
ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗದೇ ಇದ್ದರೂ 2020-21ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಸಿದ್ದಾರೆ.
ಈ ಮೊದಲೇ ತಿಳಿಸಿದಂತೆ ಎಸ್ ಎಸ್ ಎಲ್ ಸಿ ಮತ್ತು ಮೊದಲ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆ ಅಂಕ ಇದರ ಜೊತೆಗೆ ಕೃಪಾಂಕ, ಈ ಮೂರು ಅಂಶಗಳನ್ನು ಪರಿಗಣಿಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗಿದೆ.
ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ವಿವರಿಸಿದರು.
ಎಸ್ ಎಸ್ಎಲ್ಸಿ ಯ ಶೇ.45ರಷ್ಟು, ಮೊದಲ ಪಿಯುಸಿ ಶೇ. 45, ದ್ವಿತೀಯ ಪಿಯುಸಿ ಶೇ.10, ಶೇ.5ರಷ್ಟು ಕೃಪಾಂಕ ನೀಡಿ ಫಲಿತಾಂಶ ನೀಡಲಾಗಿದೆ.
ಸ್ಯಾಟ್ಸ್ ನಲ್ಲಿ ನೊಂದಾಯಿತಿ ವಿದ್ಯಾರ್ಥಿಗಳಿಗೆ ವವರ ಮೊಬೈಲ್ ಗೆ ಎಸ್ ಎಂ ಎಸ್ ಬರುತ್ತೆ. ತಜ್ಞರ ವರದಿ ಆಧಾರದ ಮೇಲೆ ಫಲಿತಾಂಶ ನೀಡಲಾಗುತ್ತಿದೆ.
3 ಲಕ್ಷ 35 ಸಾವಿರ 138 ವಿದ್ಯಾರ್ಥಿಗಳು, 3 ಲಕ್ಷ 31 ಸಾವಿರದ 359 ವಿದ್ಯಾರ್ಥಿನಿಯರು ಒಟ್ಟು ಸೇರಿ ಒಟ್ಟು ಆರು ಲಕ್ಷ 66 ಸಾವಿರ 497 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ. ಇನ್ನು ಹಳೆ ವಿದ್ಯಾರ್ಥಿಗಳು ಸೇರಿದಂತೆ 4 ಲಕ್ಷದ 50 ಸಾವಿರದ 706 ವಿದ್ಯಾರ್ಥಿಗಳು ಈ ಬಾರಿ ಉತ್ತೀರ್ಣರಾಗಿದ್ದಾರೆ.
ಇನ್ನು 95 ಸಾವಿರದ 628 ವಿದ್ಯಾರ್ಥಿಗಳು ಡಿಸ್ಟಿಕ್ಷನ್ ಪಡೆದಿದ್ದು, 3 ಲಕ್ಷದ 55 ಸಾವಿರದ 78 ವಿದ್ಯಾರ್ಥಿಗಳು ಪ್ರಥಮ ದರ್ಜೆ, 1 ಲಕ್ಷದ 47 ಸಾವಿರದ 55 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, 68 ಸಾವಿರದ 729 ವಿದ್ಯಾರ್ಥಿಗಳು ತೃತೀಯ ದರ್ಜೆ ಪಡೆದಿದ್ದು, ಒಟ್ಟು 6 ಲಕ್ಷದ 66 ಸಾವಿರದ 497 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇಬ್ಬರ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ. 2239 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿದ್ದಾರೆ.