ರಾಜ್ಯ ರಾಜಕಾರಣ ಮತ್ತೆ ಕಾವೇರಿದೆ. ಕಾಂಗ್ರೆಸ್ ಸರ್ಕಾರದ ಒಳಜಗಳದ ನಡುವೆಯೇ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಗುಪ್ತ ಭೇಟಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ.
ನಿನ್ನೆ ರಾತ್ರಿ ಖಾಸಗಿ ಸ್ಥಳದಲ್ಲಿ ಇಬ್ಬರೂ ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ಪವರ್ ಶೇರಿಂಗ್ ಕುರಿತು ಪಕ್ಷದೊಳಗಿನ ಒತ್ತಡಗಳು, ಬಣಗಳ ನಡುವೆ ನಡೆಯುತ್ತಿರುವ ಕಾರ್ಯತಂತ್ರಗಳು ಈ ಭೇಟಿಯನ್ನು ಇನ್ನಷ್ಟು ಪ್ರಮುಖವಾಗಿಸಿದೆ.
ಹೈಕಮಾಂಡ್ ಸೂಚನೆ ಮೇರೆಗೆ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆಯೆನ್ನಿಸಿದರೂ, ಒಳಗೆ ಸತತವಾಗಿ ಅಧಿಕಾರದ ಸೆಳೆತ ನಡೆಯುತ್ತಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳಿವೆ. ಇಂತಹ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ–ಡಿಕೆಶಿ ಅವರ ಭೇಟಿ ದೊಡ್ಡ ರಾಜಕೀಯ ತಿರುವಿಗೆ ಕಾರಣವಾಗಬಹುದು ಎಂಬ ಊಹಾಪೋಹಗಳು ಜೋರಾಗಿದೆ.
ರಾಜಕೀಯ ವಲಯದ ಗಮನ ಈಗ ಈ ರಹಸ್ಯ ಮಾತುಕತೆಯ ಫಲಿತಾಂಶದ ಕಡೆ ತಿರುಗಿದೆ.








