Security Guard
ಖಾಸಗಿ ಭದ್ರತಾ ಏಜೆನ್ಸಿಗಳು, ಸೂಕ್ತ ತರಬೇತಿ, ದೈಹಿಕ ಕ್ಷಮತೆ ಹೊಂದಿಲ್ಲದ ಹಾಗೂ ಯಾವುದೇ ಹಿನ್ನೆಲೆ ಗೊತ್ತಿಲ್ಲದ ಸೆಕ್ಯುರಿಟಿ ಗಾರ್ಡ್ ಗಳ ನೇಮಕಾತಿ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ‘ಕರ್ನಾಟಕ ಖಾಸಗಿ ಭದ್ರತಾ ಏಜೆನ್ಸಿ ನಿಯಮ-2022’ ಅಡಿಯಲ್ಲಿ ಕರಡು ನಿಯಮ ರೂಪಿಸಿದ್ದು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಹೊಸ ನಿಯಮದ ಪ್ರಕಾರ ಸೆಕ್ಯುರಿಟಿ ಗಾರ್ಡ್ ಗಳಿಗೆ ಪ್ರವೇಶಾತಿ ಸಮಯದಲ್ಲಿ 20 ದಿನಗಳ ಅವಧಿಯಲ್ಲಿ ಕನಿಷ್ಠ 100 ಗಂಟೆಗಳ ಕ್ಲಾಸ್ ರೂಂ ಟೀಚಿಂಗ್, 60 ಗಂಟೆ ಫೀಲ್ಡ್ ಟ್ರೈನಿಂಗ್, ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ, ದೈಹಿಕ ಕ್ಷಮತೆ ಸೇರಿದಂತೆ ಹಲವು ಕಂಡೀಷನ್ ಹಾಕಲಾಗಿದೆ.