6ನೇ ವಿವಾಹಕ್ಕೆ ತಯಾರಾಗಿದ್ದ ಸ್ವಯಂಘೋಷಿತ ಬಾಬಾ – ಕಾಮಪುರಾಣ ಬಿಚ್ಚಟ್ಟ 5ನೇ ಪತ್ನಿ
ಉತ್ತರಪ್ರದೇಶ: 6ನೇ ವಿವಾಹಕ್ಕೆ ತಯಾರಿ ನಡೆಸುತ್ತಿದ್ದ ಸ್ವಯಂಘೋಷಿತ ಬಾಬಾನ ಅಸಲಿ ಮುಖವಾಡವನ್ನ ಆತನ 5ನೇ ಪತ್ನಿ ಕಳಚಿದ್ದು, ಬಾಬಾನ್ನ ಪೊಲೀಸರು ಬಂಧಿಸಿದ್ದಾರೆ.. ಈ ಘಟನೆ ಉತ್ತರಪ್ರದೇಶದ ಕಾನ್ಪುರ್ ನಲ್ಲಿ ನಡೆದಿದೆ.
ಷಹಜಹಾನ್ ಪುರ್ ನಿವಾಸಿ ಅಂಜು ಕಥೇರಿಯಾನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಸ್ವಯಂ ಘೋಷಿತ ಬಾಬಾ ಈಗಾಗಲೇ 5 ಜನರನ್ನ ಮದುವೆಯಾಗಿದ್ದಾನೆ.. ಆದ್ರೆ ಯಾರಿಂದಲೂ ವಿಚ್ಛೇಧನ ಪಡೆಯದೇ 6ನೇ ಬಾರಿ ಮದುವೆಯಾಗಲು ಸಿದ್ಧತೆ ನಡೆಸಿದ್ದ. ಈ ವಿಚಾರವಾಗಿ ಈತನ 5ನೇ ಪತ್ನಿ ಪೊಲೀಸರಿಗೆ ದೂರು ಸಲ್ಲಿಸಿದ ನಂತರ ಬಾಬಾನನ್ನು ಬಂಧಿಸಲಾಗಿದೆ.
ಅಂಜು ಕಥೇರಿಯಾ 2005ರಲ್ಲಿ ಮೊದಲ ಬಾರಿಗೆ ಮಣಿಪುರಿ ಜಿಲ್ಲೆಯ ನಿವಾಸಿಯ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಇವರಿಬ್ಬರ ವಿವಾಹ ವಿಚ್ಛೇದನ ಪ್ರಕರಣ ಕೋರ್ಟ್ ನಲ್ಲಿದೆ. 2010ರಲ್ಲಿ ಅಂಜು ಬರೇಲಿ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದು, ಆಕೆ ಕೂಡಾ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾಲೆ.. 4 ವರ್ಷಗಳ ನಂತರ ಆಯುರೈಯಾ ಜಿಲ್ಲೆಯ ಯುವತಿಯೊಬ್ಬಳನ್ನು ವಿವಾಹವಾಗಿದ್ದ. ಈತನ ಹಿಂದಿನ ವಿವಾಹದ ರಹಸ್ಯ ತಿಳಿದ ನಂತರ 3ನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ.. ಇದಾದ ನಂತರ ಈತ ತನ್ನ 3ನೇ ಹೆಂಡತಿಯ ಸಂಬಂಧಿಯೊಬ್ಬಳನ್ನು ವಿವಾಹವಾಗಿದ್ದ. 2019ರಲ್ಲಿ 5ನೇ ಮದುವೆಯಾಗಿದ್ದಾನೆ.
ಆದ್ರೆ ಈತ ತನ್ನ ವಿವಾಹಗಳನ್ನ ಪ್ರತಿ ಬಾರಿ ಹೆಂಡತಿಯರ ಬಳಿ ಮುಚ್ಚಿಟ್ಟಿದ್ದ.. ಹಾಗೆಯೇ 5ನೇ ಪತ್ನಿಗೂ ಪತಿಯ ಕಾಮ ಪುರಾಣ ತುಂಬಾ ತಡವಾಗಿ ಗೊತ್ತಾಗಿದೆ. ಮದುವೆಯಾಗಿ ಕೆಲ ದಿನಗಳ ನಂತರ ಆಕೆಗೆ ಕಿರುಕುಳ ನೀಡಲಾರಂಭಿಸಿದ್ದ. ಇದರಿಂದ ರೋಸಿ ಹೋದ ಆಕೆ ಕಳೆದ ವರ್ಷ ಚಾಕೇರಿ ಪೊಲೀಸ್ ಠಾಣೆಯಲ್ಲಿ ಅಂಜು ವಿರುದ್ಧ ದೂರು ದಾಖಲಿಸಿದ್ದಳು. ಬಳಿಕ ಬಾಬಾ ಪ್ರತ್ಯೇಕವಾಗಿ ವಾಸವಾಗಿದ್ದ.. ಇದೀಗ 6 ನೇ ಬಾರಿ ವಿವಾಹವಾಗಲು ಸಿದ್ಧತೆ ನಡೆಸಿದ ವೇಳೆ 5ನೇ ಪತ್ನಿ ದೂರು ನೀಡಿದ್ದು ಆತನನ್ನ ಬಂಧಿಸಲಾಗಿದೆ.








