covid vaccine
ಕೊರೊನಾ ಲಸಿಕೆಯ ಕಾಲ್ ಬಂದ್ರೆ ಎಚ್ಚರ..! ಇಂತಹದ್ದೇ ಕರೆ ನಂಬಿ 12 ಲಕ್ಷ ರೂ. ಕಳೆದುಕೊಂಡ ವೃದ್ಧ.!
ಕೊರೊನಾ ಲಸಿಕೆ ಕುರಿತಾಗಿ ಬಂದಿದ್ದ ಕರೆ ನಂಬಿ ವೃದ್ಧರೊಬ್ಬರು 2 ಗಂಟೆಯಲ್ಲಿ 12 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಹೌದು. ಮಹಾಮಾರಿ ಕೊರೊನಾ ವಿರುದ್ಧ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತಿದೆ.
ಕೋವಿಡ್-ಸೋಂಕಿತ ಬಾವಲಿಗಳಿಂದ ಕಚ್ಚಲ್ಪಟ್ಟದ್ದನ್ನು ಒಪ್ಪಿಕೊಂಡ ವುಹಾನ್ ಲ್ಯಾಬ್ ವಿಜ್ಞಾನಿಗಳು
ಆದ್ರೆ ಈ ಅಭಿಯಾನವನ್ನ ಕೆಲ ವಂಚಕರು ದುರ್ಬಳಕೆ ಮಾಡಿಕೊಂಡಿದ್ದು, ಇದೇ ಹೆಸರಲ್ಲೇ ಜನರಿಗೆ ಪಂಗನಾಮ ಹಾಕಲು ಮುಂದಾಗಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳುವ ಸಲುವಾಗಿ ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ವಿವರ, ಓಟಿಪಿ ಹೇಳಿ ಎಂದು ಮಾಹಿತಿ ಪಡೆದುಕೊಳ್ಳುವ ಮೂಲಕ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.
ಕೊರೊನಾ ಭೀತಿ : ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಮಹಾರಾಷ್ಟ್ರ ಮೂಲದ ಖಾಸಗಿ ಕಂಪನಿಯ ಮುಖ್ಯಸ್ಥ ಮಿಲಿಂದ್ ಕ್ಷೀರಸಾಗರ ಎಂಬವರು ಈ ಕುರಿತು ಎಚ್ಚರಿಕೆ ನೀಡಿದ್ದು, ಇಂತಹ ವಂಚಕರ ಕರೆ ನಂಬಿದ ತಮ್ಮ ಸ್ನೇಹಿತರೊಬ್ಬರ ತಂದೆ ಎರಡು ತಾಸಿನಲ್ಲಿ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ವಂಚಕರು ಪೊಲೀಸರಂತೆಯೂ ಕಾಲ್ ಮಾಡಿ ವಂಚಿಸಬಹುದು ಎಚ್ಚರಿಕೆಯಿಂದಿರಿ ಎಂದಿದ್ದಾರೆ.
covid vaccine
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








