ನಂಬಿಕೆ ದ್ರೋಹ ಮಾಡಿದವನಿಗೆ ಚಳಿ ಬಿಡಿಸಿದ್ದ NTR
ತನ್ನ ಸೇರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನ ನಟ ಜ್ಯೂನಿಯರ್ ಎನ್ ಟಿಆರ್, ರೂಮಿನಲ್ಲಿ ಕೂಡಿ ಹಾಕಿ ಮೂರು ದಿನಗಳ ಕಾಲ ಹಿಗ್ಗಾಮುಗ್ಗಾ ಹೊಡೆದಿದ್ದ ಎಂಬ ಸ್ಫೋಟಕ ಸುದ್ದಿ ಸದ್ಯ ಟಾಲಿವುಡ್ ನಲ್ಲಿ ಸಂಚನಲವನ್ನು ಸೃಷ್ಠಿ ಮಾಡಿದೆ. Senior producer avula giri about jr NTR saaksha tv
ಹೌದು…! ಜೂ ಎನ್ಟಿಆರ್ ನಟನೆಯ ‘ಆಂಧ್ರಾವಾಲಾ’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಅವುಲ ಗಿರಿ, ಜೂ ಎನ್ಟಿಆರ್ ಹಾಗೂ ತಮ್ಮ ಬಂಧದ ಬಗ್ಗೆ ಮಾತನಾಡುತ್ತಾ, ಈ ಸ್ಫೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಜ್ಯೂನಿಯರ್ ಎನ್ ಟಿಆರ್ ಸದ್ಯ ಟಾಲಿವುಡ್ ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು.
ತ್ರಿಬಲ್ ಆರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಹೊರಟಿರುವ ಎನ್.ಟಿ.ಆರ್, ಮುಂದೆ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರಂತೆ.
ಈ ಮಧ್ಯೆ ಜ್ಯೂನಿಯರ್ ಎನ್ ಟಿಆರ್ ಬಗ್ಗೆ ಅವುಲಗಿರಿ ಸಂದರ್ಶನದಲ್ಲಿ ಮಾತನಾಡುತ್ತಾ, ಜೂ ಎನ್ಟಿಆರ್ ವ್ಯಕ್ತಿಯೊಬ್ಬನ ಮೇಲೆ ಧಾರುಣವಾಗಿ ಹಲ್ಲೆ ಮಾಡಿದ್ದರೆಂಬ ವಿಷಯವನ್ನು ಹೇಳಿದ್ದಾರೆ.
‘ಆಂಧ್ರಾವಾಲಾ’ ಸಿನಿಮಾ ಬಳಿಕ ನಾನೂ ಮತ್ತು ಜೂ.ಎನ್ಟಿಆರ್ ಆತ್ಮೀಯರಾಗಿದ್ದೆವು. ನಮ್ಮಿಬ್ಬರ ಕುಟುಂಬಗಳು ಪರಸ್ಪರ ಹತ್ತಿರವಾಗಿದ್ದವು. ಆದರೆ ವ್ಯಕ್ತಿಯೊಬ್ಬನಿಂದಾಗಿ ನಮ್ಮಿಬ್ಬರ ನಡುವೆ ಕಂದಕ ಏರ್ಪಟ್ಟಿತು.
ಆ ವ್ಯಕ್ತಿ ಜೂ ಎನ್ಟಿಆರ್ ಹೆಸರು ಬಳಸಿ ಸಾಕಷ್ಟು ಹಣ ಮಾಡಿಕೊಂಡ. ಬಳಿಕ ಜೂ ಎನ್ಟಿಆರ್ಗೆ ಆ ವ್ಯಕ್ತಿಯ ನಿಜ ಮುಖ ಗೊತ್ತಾಯಿತು.
ಕೂಡಲೇ ಅವನನ್ನು ರೂಂ ಒಂದರಲ್ಲಿ ಕೂಡಿ ಹಾಕಿ ಸತತವಾಗಿ ಮೂರು ದಿನಗಳು ಅವನನ್ನು ಜೂ ಎನ್ಟಿಆರ್ ಹೊಡೆದಿದ್ದರು ಎಂದು ಅವುಲ ಗಿರಿ ಹೇಳಿದ್ದಾರೆ.
ಅಂದಹಾಗೆ ಆ ರೀತಿ ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಈಗಿನ ಆಂಧ್ರಪ್ರದೇಶದ ಸಚಿವ ಕೊಡಾಲಿ ನಾನಿ ಜ್ಯೂನಿಯರ್ ಎನ್ ಟಿಆರ್ ಬಳಿ ಬಿಟ್ಟಿದ್ದನಂತೆ. ಆದ್ರೆ ಅವರ ಹೆಸರನ್ನೂ ಮಾತ್ರ ಎಲ್ಲೂ ಬಹಿರಂಗಗೊಳಿಸಿಲ್ಲ.