ಕಿರುತೆರೆಯ ಸ್ಟಾರ್ ಗಳಾಗಿ ಜನಪ್ರಿಯತೆ ಗಳಿಸಿರುವ ನಟರು ಅಷ್ಟೇ ಯಾಕೆ ಬಿಗ್ ಬಾಸ್ ನಲ್ಲು ಮಿಂಚಿ ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟೊರುವ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟರ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ. ನಟ ಚಂದನ್, ಕವಿತಾ ಗೌಡ, ನೇಹಾ ಗೌಡ ಸೇರಿದ್ದಂತೆ ಕಿರುತೆರೆ ಕಲಾವಿದರ ತಂಡ ಇತ್ತೀಚೆಗಷ್ಟೇ ಪ್ರವಾಸಕ್ಕೆ ತೆರಳಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಶಿವಗಂಗೆಯಲ್ಲಿ ಈ ತಂಡ ತೆಗೆಸಿಕೊಂಡಿರುವ ಫೋಟೋ ಭಾರೀ ಚರ್ಚೆಗೆ ಕಾರಣವಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ತೀವ್ರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ನೆಟ್ಟಿಗರು ಗರಂ ಆಗುವುದಕ್ಕೆ ಕಾರಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ತೀರ್ಥ ಕಂಬದ ಬಳಿ ಕವಿತಾ ಗೌಡ ಮತ್ತು ಚಂದನ್ ಶೂ ಧರಿಸಿ ನಿಂತಿರುವುದು.
ಹೌದು ಪವಿತ್ರ ಸ್ಥಳದಲ್ಲಿ ಚಪ್ಪಲಿ ಧರಿಸಿ ಅಪಮಾನ ಮಾಡಲಾಗಿದೆ ಎಂದು ನೆಟ್ಟಿಗರು ಈ ನಟರ ವಿರುದ್ಧ ಕೆಂಡಕಾರುತ್ತಿದ್ದಾರೆ. ಮತ್ತೊಂದೆಡೆ ಈ ಫೋಟೋಗಳನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿರುವ ನೆಟ್ಟಿಗರು ಅಲ್ಲದೆ ಸ್ಥಳಿಯ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ವೈಕುಂಠ ಏಕಾದಶಿ 2025: ದಿನಾಂಕ ಮತ್ತು ಮಹತ್ವ
ವೈಕುಂಠ ಏಕಾದಶಿ ಮಹತ್ವ: ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ದಿನಗಳಲ್ಲಿ ಒಂದಾಗಿದೆ. ಈ ದಿನದಂದು ಶ್ರೀಮನ್ ನಾರಾಯಣನನ್ನು ಭಕ್ತಿಯಿಂದ ಪೂಜಿಸುವ ಮೂಲಕ ಭಕ್ತರು ಪಾಪಮುಕ್ತಿ...