ಬೆಂಗಳೂರು: ಕೊರೊನ ಅಟ್ಟಹಾಸದ ನಡುವೆ ರಾಜ್ಯದಲ್ಲಿ ಶಾಲೆಗಳ ಪುನಾರಂಭ ವಿಚಾರವಾಗಿ ಇಂದು ಇಡೀ ದಿನ ಸರಣಿ ಸಭೆಗಳು ನಡೆಯಲಿವೆ.
ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಮೂರನೇ ದಿನವಾದ ಇಂದೂ ಕೂಡ ಸರಣಿ ಸಭೆಗಳು ನಡೆಯಲಿವೆ.
ಶಾಲೆಗಳನ್ನು ತೆರೆಯಲು ಸುಳಿವು ನೀಡಿರುವ ಶಿಕ್ಷಣ ಇಲಾಖೆ, ಮೊದಲು ಖಾಸಗಿ ಶಾಲೆಗಳ ಸಂಘಟನೆಗಳೊಂದಿಗೆ ಸಭೆ ಆರಂಭವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುವ ಸಭೆಗೆ ಕ್ಯಾಮ್ಸ್, ಕುಸಮಾ, ಕರ್ನಾಟಕ ಸಿಬಿಎಸ್ಇ ಹಾಗೂ ಐಸಿಎಸ್ಇ ಸಂಘಟನೆಗಳ ಪದಾಧಿಕಾರಿಗನ್ನು ಆಹ್ವಾನಿಸಲಾಗಿದ್ದು, ಸಭೆ ನಡೆಯುತ್ತಿದೆ.
ಕೊರೊನಾ ಅಬ್ಬರದ ಶಾಲೆಗಳನ್ನು ಆರಂಭಿಸಲು ಖಾಸಗಿ ಶಾಲೆಗಳಲ್ಲಿ ಎಲ್ಲ ರೀತಿಯ ಅನುಕೂಲ, ವ್ಯವಸ್ಥೆ ಹೇಗಿದೆ ಎಂಬುದರ ಬಗ್ಗೆ ಅನ್ಬುಕುಮಾರ್ ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ಚರ್ಚಿಸಲಾಗುವ ಅಂಶಗಳು..
– ಶಾಲೆಗಳಲ್ಲಿ ಮೊದಲು ಯಾವ ತರಗತಿಯನ್ನು ಆರಂಭಿಸಬೇಕು..?
– ಯಾವ ದಿನಾಂಕದಿಂದ ಶಾಲೆ ಆರಂಭಿಸಬೇಕು…?
– ಯಾವ ರೀತಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು…?
– ತರಗತಿಗಳನ್ನು ಎಷ್ಟು ಅವಧಿ ನಡೆಸಬೇಕು…?
ಗ್ರಾಮೀಣ/ನಗರಗಳ ಪೋಷಕರ ಅಭಿಪ್ರಾಯ ಸಂಗ್ರಹ
ಬೆಂಗಳೂರಿನ ಖಾಸಗಿ ಶಾಲೆಗಳ ಸಂಘಟನೆಗಳ ಜತೆ ಸಭೆ ಬಳಿ ಪ್ರತಿ ತಾಲೂಕಿನ ಒಬ್ಬರು ಶಾಲಾಭಿವೃದ್ಧಿ ಸಮಿತಿ(ಎಸ್ಡಿಎಂಸಿ) ಅಧ್ಯಕ್ಷರು, ಗ್ರಾಮೀಣ ಹಾಗೂ ನಗರಗಳ ಖಾಸಗಿ ಶಾಲೆಗಳ ಮುಖ್ಯಸ್ಥರು, ಹಾಗೂಪೋಷಕರ ಜತೆ ಸಭೆ ನಡೆಯಲೊದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸಂಬಂಧಿಸಿದ ಶಾಲೆಯ ಮುಖ್ಯಸ್ಥರು ಹಾಗೂ ಜಿಲ್ಲಾ ಉಪ ನಿರ್ದೇಶಕರ ಜತೆಗೂ ಅನ್ಬುಕುಮಾರ್ ಮಾತುಕತೆ ನಡೆಸಲಿದ್ದಾರೆ.
ಸಭೆಯಲ್ಲಿ ಚರ್ಚಿಸುವ ಪ್ರಮುಖ ಅಂಶಗಳು..
ಶಾಲೆಗಳನ್ನ ಪ್ರಾರಂಭಿಸಲು ತರಗತಿಗಳನ್ನ ಹಾಗೂ ದಿನಾಂಕ ನಿಗದಿಪಡಿಸುವ ಬಗ್ಗೆ
ಶಾಲೆಗಳನ್ನ ಪ್ರಾರಂಭಿಸುವ ಮೊದಲು ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ
ಶಾಲೆ ನಡೆಯುವ ಅವಧಿ ನಿಗಧಿ ಪಡಿಸುವ ಬಗ್ಗೆ ( ಪೂರ್ಣ ದಿನ/ಅರ್ಧ ದಿನ)
ಪೋಷಕರ ಅಭಿಪ್ರಾಯ ಸಂಗ್ರಹಿಸಿ ಮಂಡಿಸುವುದು
ನಿನ್ನೆಯೇ ಎಲ್ಲಾ ಕ್ಷೇತ್ರಾಧಿಕಾರಿಗಳ(ಬಿಇಒ) ಜೊತೆ ಚರ್ಚೆ ನಡೆಸಿರುವ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬಕುಮಾರ್, ಇಂದು ಮತ್ತೊಂದು ಹಂತದಲ್ಲಿ ಚರ್ಚೆ ನಡೆಸಿ ಸಮಗ್ರ ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಸಲ್ಲಿಸಲಿದ್ದಾರೆ.
ರಾಜ್ಯದಲ್ಲಿ ಶಾಲೆ ಪುನಾರಂಭಿಸಲು ಶಿಕ್ಷಣ ಇಲಾಖೆ ಸುಳಿವು ನೀಡಿದ್ದು, ಇಂದಿನ ಸಭೆ ಕೇವಲ ಕಣ್ಣೊರೆಸುವ ತಂತ್ರವಾ ಅಥವಾ ಸಭೆಯಲ್ಲಿ ಬರುವ ಅಭಿಪ್ರಾಯಗಳನ್ನು ಪರಿಗಣಿಸುತ್ತಾ, ಇಂದೇ ಹೊರಬೀಳಲಿದ್ಯಾ ಶಾಲೆ ಆರಂಭದ ದಿನಾಂಕ..? ಅಥವಾ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel