`ಕೋವಿಶೀಲ್ಡ್ ಅಡ್ಡ ಪರಿಣಾಮ’ಗಳ ಬಗ್ಗೆ `ಸೆರಮ್ ಇನ್ ಸ್ಟಿಟ್ಯೂಟ್ ಎಚ್ಚರಿಕೆ’
ನವದೆಹಲಿ : ದೇಶದಾದ್ಯಂತ ಕೊರೊನಾ ಲಸಿಕೆ ಮಹಾ ಅಭಿಯಾನ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತಿದೆ.
ಈ ಮಧ್ಯೆ ಕೋವಿಶೀಲ್ಡ್ ಲಸಿಕೆ ಬಗ್ಗೆ ಭಾರತ್ ಸೆರಮ್ ಇನ್ ಸ್ಟಿಟ್ಯೂಟ್ ಕೆಲವೊಂದು ಎಚ್ಚರಿಕೆಗಳನ್ನು ನೀಡಿದೆ. ಅಂದರೆ ಕೋವಿಶೀಲ್ಡ್ ಲಸಿಕೆಯನ್ನು ಯಾರು ತೆಗೆದುಕೊಳ್ಳಬೇಕು..? ಯಾರು ತೆಗೆದುಕೊಳ್ಳಬಾರದು ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಕೋವಿಶೀಲ್ಡ್ ಲಸಿಕೆಯಲ್ಲಿ ಎಲ್ ಹಿಸ್ಟಿಡೈನ್, ಎಲ್ ಹಿಸ್ಟಿಡೈನ್ ಹೈಡ್ರೋಕ್ಲೋರೈಡ್ ಮೊನೋಹೈಡ್ರೇಟ್, ಮ್ಯಾಗ್ನೀಷಿಯಂ ಕ್ಲೋರೈಡ್ ಹೆಕ್ಸಾಹೈಡ್ರೇಟ್, ಪೋಲಿಸೋರ್ಬೆಟ್, ಎಥನಾಲ್, ಸುಕ್ರೋಸ್, ಸೋಡಿಯಂ ಕ್ಲೋರೈಡ್, ಡೈಸೋಡಿಯಂ ಎಡಿಟೇಟ್ ಡಿಹೈಡ್ರೇಟ್ ಹಾಗೂ ಇಂಜೆಕ್ಷನ್ ವಾಟರ್ ಬಳಕೆ ಮಾಡಿರುವುದಾಗಿ ಸೆರಮ್ ತಿಳಿಸಿದೆ.
ಹೀಗಾಗಿ ಅಲರ್ಜಿ ಸಮಸ್ಯೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಕೋವಿಶೀಲ್ಡ್ ಲಸಿಕೆಗಳನ್ನು ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ. ಅಲ್ಲದೆ ಗರ್ಭಿಣಿಯರು ಹಾಗೂ ಗರ್ಭಿಣಿಯಾಗುವ ತಯಾರಿಯಲ್ಲಿರುವವರು, ಬಾಣಂತಿಯರು, ಜ್ವರ ಲಕ್ಷಣ ಇರುವವರು ಈ ಲಸಿಕೆಯನ್ನು ಪಡೆಯಬೇಡಿ ಎಂದು ಸೆರಮ್ ತಿಳಿಸಿದೆ.
ಇನ್ನು ಈ ಹಿಂದೆಯೇ ಅಲರ್ಜಿ ಸಮಸ್ಯೆ ಇರುವವರು ಈ ಲಸಿಕೆಯನ್ನು ತೆಗೆದುಕೊಳ್ಳುವುದು ಅಷ್ಟು ಉಚಿತವಲ್ಲ ಎಂದು ಕೆಲ ವೈದ್ಯರು ಅಭಿಪ್ರಾಯಪಟ್ಟಿದ್ದರು.
ಇದೆಲ್ಲ ಒಂದು ಕಡೆಯಾದ್ರೆ ರಾಜ್ಯದಲ್ಲಿ ನಿವಾಸಿ ವೈದ್ಯರು ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರಿಗೆ ವೈದ್ಯರು ಪತ್ರ ಬರೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









