ಬೆಂಗಳೂರು : ಕೊರೊನಾ ಸೋಂಕು ಹಿನ್ನೆಲೆ ಸರ್ಕಾರ ಅಧಿವೇಶನದ ಅವಧಿಯನ್ನು ಕಡಿತಗೊಳಿಸಿದ್ದು ದುರಂತ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿವೇಶನದ ಅವಧಿಯನ್ನು ಕಡಿತಗೊಳಿಸಿದ್ದು ದುರಂತ.
ಅಧಿವೇಶನವನ್ನು ಕನಿಷ್ಠ 30 ರಿಂದ 35 ದಿನಗಳ ವರೆಗೆ ನಡೆಸಬೇಕಿತ್ತು. ಕೊರೊನಾ ಸಮಯದಲ್ಲಿ ಸರ್ಕಾರದ ಕ್ರಮದ ಬಗ್ಗೆ ಚರ್ಚೆ ಮಾಡಬೇಕಿತ್ತು.
ಆದರೆ, ಆ ಕೆಲಸ ಆಗದೆ ಸದನ ಮೊಟಕು ಮಾಡಿದ್ದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ : ಬಾಬ್ರಿ ಮಸೀದಿ ಧ್ವಂಸ | ಬಿಜೆಪಿ `ಭೀಷ್ಮ’ ವಿಜಯ | ಏನಿದು ಪ್ರಕರಣ..?
ಇದೇ ವೇಳೆ ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗಳ ಬಗ್ಗೆ ಮಾತನಾಡಿದ ಕಾಗೋಡು ತಿಮ್ಮಪ್ಪ, ಈ ಕಾಯ್ದೆಗಳನ್ನ ನಾನು ವಿರೋಧಿಸುತ್ತೇನೆ.
ಇವುಗಳ ಬಗ್ಗೆ ಕನಿಷ್ಠ 10 ದಿನವಾದರೂ ಚರ್ಚೆ ಆಗಬೇಕಿತ್ತು. ಆದರೆ, ಆದು ಆಗಿಲ್ಲ ಎಂಬ ನೋವು ನನಗಿದೆ.
ಸರ್ಕಾರ ಭೂ ಶಾಸನ ಬದಲಾವಣೆ ಮಾಡಬಾರದಿತ್ತು. ಇದರಿಂದ ಬಂಡವಾಳ ಶಾಹಿಗಳಿಗೆ ಅನುಕೂಲವಾಗುತ್ತೆ ಎಂದರು.








