ನವರಾತ್ರಿಯ ಸಪ್ತಮಿಯ ದಿನ ಪೂಜಿಸುವ ದುರ್ಗಾ ಮಾತೆಯ ಅವತಾರವೇ ಕಾಲರಾತ್ರಿ. ನೋಡಲು ಭಯಂಕರಿಯಾದರೂ ಭಕ್ತರ ಪಾಲಿಗೆ ಈಕೆ ಶುಭಂಕರಿ. ಜಗದಲ್ಲಿನ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವವಳು.
ನವರಾತ್ರಿಯ ಏಳನೇ ದಿನ ದುರ್ಗಾಮಾತೆಯ ಭಯಂಕರ ರೂಪವೇ ಕಾಲರಾತ್ರಿ. ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರವೇರಿಸುವವಳೇ ಕಾಲರಾತ್ರಿ. ಈಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಬಹಳ ಭೀಭತ್ಸ್ಯವಾದ ರೂಪವೆಂದರೆ ಕಾಲರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಲರಾತ್ರಿ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ,ದೇವಸ್ಥಾನ ಕಟೀಲು
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಜ್ಞಾನೇಶ್ವರ್ ರಾವ್ 8548998564 ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-call/WhatsApp 85489 98564
ಕಾಲರಾತ್ರಿಯ ರೂಪ
ಹೆಸರೇ ಹೇಳುವಂತೆ ತಾಯಿಯು ಕಾರ್ಗತ್ತಲು ಮತ್ತು ಸಮಯದ ರೂಪವಾಗಿದ್ದಾಳೆ. ಬ್ರಹ್ಮಾಂಡದಂತೆ ದುಂಡಗಿರುವ ತ್ರಿನೇತ್ರೆಯ ಕಣ್ಣುಗಳಿಂದ ಕಾಂತಿಯು ಹೊರಹೊಮ್ಮುತ್ತದೆ. ಶ್ವಾಸೋಶ್ವಾಸ ಮಾಡುವಾಗ ಅಗ್ನಿಯ ಜ್ವಾಲೆಗಳು ಹೊರಹೊಮ್ಮುತ್ತವೆ. ಬಲಗಡೆಯ ಕೈಗಳಲ್ಲಿ ವರಮುದ್ರೆ ಹಾಗೂ ಅಭಯಮುದ್ರೆ ಇದ್ದರೆ ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ.ಈಕೆಯ ವಾಹನ ಗಾರ್ಧಭ(ಕತ್ತೆ).
ಕಾಲರಾತ್ರಿಯ ಕಥೆ
ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.
ಕಾಲರಾತ್ರಿಯ ಮಹತ್ವ
ಕಾಲರಾತ್ರಿಯು ಶನಿಗ್ರಹದ ಅಧಿಪತಿ. ಜನರು ಮಾಡಿರುವಂತಹ ಕೆಡುಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವವಳು. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವಳು, ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯನ್ನು ಗುರುತಿಸುವವಳು ಈಕೆ. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದ ಶನಿಯಿಂದ ಆಗುವ ತೊಂದರೆ ಹಾಗೂ ಸಾಡೇಸಾತಿ ಪ್ರಭಾವವನ್ನು ತಗ್ಗಿಸಬಹುದು.
ದಾನವರು, ರಾಕ್ಷಸರು, ಭೂತ-ಪ್ರೇತ ಮುಂತಾದುವುಗಳು ಇವಳ ಸ್ಮರಣೆಯಿಂದಲೇ ಭಯಭೀತವಾಗಿ ಓಡಿ ಹೋಗುತ್ತವೆ. ಇವಳ ಉಪಾಸಕರಿಗೆ ಅಗ್ನಿ, ಜಲ, ಶತ್ರು ಮತ್ತು ರಾತ್ರಿಯ ಭಯ ಎಂದೂ ಆಗುವುದಿಲ್ಲ.
ಕಾಲರಾತ್ರಿಯ ಪೂಜೆ
ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂವೆಂದರೆ ರಾತ್ರಿ ಅರಳುವ ಮಲ್ಲಿಗೆ ಹೂವು. ಶ್ರದ್ಧಾಭಕ್ತಿಯಿಂದ ನವರಾತ್ರಿಯ ಏಳನೇ ದಿನ ಕಾಲರಾತ್ರಿಗೆ ಪೂಜೆ ಸಲ್ಲಿಸಬೇಕು. ಮೊದಲು ಗಣೇಶನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಆರತಿಯೊಂದಿಗೆ ಪೂಜೆಯನ್ನು ಕೊನೆಗೊಳಿಸಬೇಕು. ಈ ದಿನ ಕಾಲರಾತ್ರಿಗೆ ಅನ್ನದಿಂದ ಮಾಡಿದ ಯಾವುದೇ ನೈವೇದ್ಯ ಅಥವಾ ಎರಿಯಪ್ಪ ಅರ್ಪಿಸಬಹುದು.
ಕಾಲರಾತ್ರಿಯ ಮಂತ್ರ
ಓಂ ದೇವೀ ಕಾಲರಾತ್ರ್ಯೈ ನಮಃ
ಓಂ ದೇವಿ ಕಾಲರಾತ್ರ್ಯೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ
ಕಾಲರಾತ್ರಿ ಪ್ರಾರ್ಥನೆ
ಏಕ್ವೇವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ
ಸ್ತುತಿ
ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಕಾಲರಾತ್ರಿ ಧ್ಯಾನ
ಕರಾಲಾವಂದನ ಘೋರಂ ಮುಕ್ತಾಕ್ಷಿ ಚತುರ್ಭುಜಂ
ಕಾಲರಾತ್ರಿಂ ಕರಾಲಿಮ್ಕಾ ದಿವ್ಯಾಂ ವಿದ್ಯುತ್ಮಾಲ ವಿಭೂಷಿತಂ
ದಿವ್ಯಾಂ ಲಾಹುವಾಜ್ರಾ ಖಡ್ಗ ವಮೋಘೋರ್ಧ್ವಾ ಕರಂಭುಜಂ
ಅಭಯಂ ವರದಂ ಚೈವ ದಕ್ಷಿಣೋಧವಘಃ ಪರ್ಣಿಕಾಂ ಮಾಂ
ಮಹಾಮೇಘ ಪ್ರಭಂ ಶ್ಯಾಮಂ ತಕ್ಷ ಚೈವಾ ಗಾದರ್ಭಾರುಧ
ಘೋರದಂಶ ಕರಾಲ್ಯಾಸಂ ಪಿನ್ನೋನಾತಾ ಪಯೋಧರಂ
ಸುಖ ಪ್ರಸನ್ನವಧನ ಸ್ಮರೇಣ ಸರೋರುಹಂ
ಇವಾಂ ಸಚಿಯಂತಾಯೆತ್ ಕಾಲರಾತ್ರಿಂ ಸರ್ವಕಂ ಸಮೃದ್ಧಿಂ
ಕಾಲರಾತ್ರಿ ಸ್ತೋತ್ರ
ಹಿಂ ಕಾಲರಾತ್ರಿ ಶ್ರಿಂ ಕರಾಲಿ ಚ ಕ್ಲಿಂ ಕಲ್ಯಾಣಿ ಕಲಾವತಿ
ಕಲಾಮಾತಾ ಕಾಳಿದರ್ಪದ್ನಿ ಕಾಮದಿಶಾ ಕುಪನ್ವಿತಾ
ಕಾಮಬಿಜಪಂದ ಕಮಬಿಜಸ್ವರೂಪಿಣಿ
ಕುಮತಿಘ್ನಿ ಕುಲಿನಾರ್ತಿನಾಶಿನಿ ಕುಲಾ ಕಾಮಿನಿ
ಕ್ಲಿಂ ಹ್ರಿಂ ಶ್ರೀಂ ಮಾಂತ್ರ್ವರ್ನೆನಾ ಕಾಲಾಕಂತಕಘಾತಿನಿ
ಕೃಪಾಮಯಿ ಕೃಪಾಧಾರ ಕೃಪಾ…