ಕಲ್ಲಿದ್ದಲು ಗಣಿ ಕುಸಿತ | ಅವಶೇಷಗಳಡಿ ಸಿಲುಕಿದ 50ಕ್ಕೂ ಹೆಚ್ಚು ಜನ?
ಜಾರ್ಖಾಂಡ : ಕಲ್ಲಿದ್ದಲಿನ ಕಣಿವೆ ಕುಸಿದು ಕಣಿವೆ ಅಡಿ ಹಲವರು ಸಿಲುಕಿರುವ ಘಟನೆ ಜಾರ್ಖಂಡ್ ನ ಧನ್ ಬಾದ್ ಕಣಿವೆಯಲ್ಲಿ ನಡೆದಿದೆ.
ಘಟನೆಯಲ್ಲಿ ಅವಶೇಷಗಳಡಿ 50ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಜಾರ್ಖಾಂಡನ ಧನ್ ಬಾದ್ ನಲ್ಲಿ ಕೈಬಿಟ್ಟ ಕಲ್ಲಿದ್ದಲು ಗಣಿ ಕುಸಿದು 50ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ.
ಈ ವರ್ಷದ ಫೆಬ್ರವರಿ ಆರಂಭದಲ್ಲಿಯೂ ಇದೇ ರೀತಿಯ ಘಟನೆ ನಡಡೆದಿತ್ತು. ಫೆಬ್ರವರಿಯಲ್ಲಿ ಧನ್ಬಾದ್ ನ ನಿರ್ಸಾ ಬ್ಲಾಕ್ ನ ಇಸಿಎಲ್ ಮುಗ್ಮಾ ಪ್ರದೇಶದಲ್ಲಿ 20 ಅಡಿ ಎತ್ತರದಿಂದ ಗಣಿಕಾರಿಕೆಯ ಉಪಕರಣವೊಂದು ಬಿದ್ದ ಪರಿಣಾಮ 5 ಜನರು ಸಾವನ್ನಪ್ಪಿದ್ದರು.









