ಬೀಜಿಂಗ್: ನೇಪಾಳ (Nepal) ಮತ್ತು ಟಿಬೆಟ್ (Tibet) ಗಡಿಯಲ್ಲಿ 7.1 ತೀವ್ರತೆಯ ಭೂಕಂಪದ (EarthQuake) ಅನುಭವವಾಗಿದ್ದು, 32 ಜನ ಬಲಿಯಾಗಿದ್ದಾರೆ.
ಟಿಬೆಟ್‌ನಲ್ಲಿ ಸಂಭವಿಸಿದರೂ ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ (NCS), ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ.
ಚೀನಾದ Xinhua ನ್ಯೂಸ್ ಏಜೆನ್ಸಿ 32 ಮಂದಿ ಮೃತಪಟ್ಟರೆ 38 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಭೂಕಂಪನದ ಅನುಭವವಾಗುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.








