ಯುವತಿ ಎದುರು ಗುಪ್ತಾಂಗ ಪ್ರದರ್ಶಿಸಿದ ಕಾಮುಕ..!
ಮಂಗಳೂರು: ಯುವತಿಯೊಬ್ಬಳ ಎದುರು ಗುಪ್ತಾಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಕಾಮುಕನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಯುವತಿ ಎದುರಿಗೆ ಬಂದಿರುವ ವ್ಯಕ್ತಿ ಗುಪ್ತಾಂಗ ತೋರಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಪಿಲಾರು ನಿವಾಸಿ ಮೊಹಮ್ಮದ್ ಆರಿಫ್(27) ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದು, ಉಳ್ಳಾಲ ಠಾಣೆ ಪೊಲೀಸರು ಆತನನ್ನ ಬಂಧಿಸಿದ್ದಾರೆ.
ಕುತ್ತಾರ್ ವಿಷ್ಣುಮೂರ್ತಿ ರಸ್ತೆಯ ಮೂಲಕ ಜಂಕ್ಷನ್ ಕಡೆಗೆ ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ ಈತ ಗುಪ್ತಾಂಗ ತೋರಿಸಿದ್ದಾನೆ. ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಆರೋಪಿ, ಮಾಸ್ಕ್ ಮತ್ತು ಟೋಪಿ ಧರಿಸಿದ್ದ. ಯುವತಿ ಎದುರಾದ ಸಂದರ್ಭದಲ್ಲಿ ಖಾಸಗಿ ಅಂಗ ತೋರಿಸಿದ್ದಾನೆ.
ಬಳಿಕ ಯುವತಿ ಸಮೀಪದ ಅಂಗಡಿಗೆ ಹೋಗಿ ಸಹಾಯ ಕೇಳಿದ್ದಾಳೆ. ಈ ವೇಳೆ ಸ್ಥಳೀಯರು ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಯುವತಿಯ ತಾಯಿ ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ಒಂದು ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೂ ವಿಚಾರಣೆ ಬಳಿಕ ಈತ ಈ ಹಿಂದೆ ಹಲವು ಮಹಿಳೆಯರ ಬಳಿ ಇದೇ ರೀತಿ ಅಸಭ್ಯವಾಗಿ ನಡೆದುಕೊಂಡಿರುವುದು ಬಯಲಾಗಿದೆ.








