20ರ ಯುವತಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ 17 ರ ಬಾಲಕ ಅರೆಸ್ಟ್..!
ನವದೆಹಲಿ : 17 ವರ್ಷದ ಬಾಲಕನೋರ್ವ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ಮೂಲಕ 20 ವರ್ಷದ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಆತನನ್ನ ಬಂಧಿಸಿದ್ದಾರೆ. ಈ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿದ ಐದು ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗಗನಸಖಿ ತರಬೇತಿ ಪಡೆಯುತ್ತಿದ್ದ ಯುವತಿಗೆ ಆರೋಪಿ ಇನ್ ಸ್ಟಾಗ್ರಾಮ್ ಮೂಲಕ ಕಿರುಕುಳ ಕೊಡುತ್ತಿದ್ದ ನ್ನಲಾಗಿದೆ. ಯುವತಿಯ ಇ ಮೇಲ್ ಹ್ಯಾಕ್ ಮಾಡಲು ಕೂಡ ಆತ ಪ್ರಯತ್ನಿಸಿದ್ದ ಎಂದು ವರದಿಯಾಗಿದೆ. ಅಲ್ಲದೇ ತನ್ನ ಜೊತೆ ಲೈಂಗಿಕ ಸಂಬಂಧ ಹೊಂದುವಂತೆ ಯುವತಿಯನ್ನ ಪೀಡಿಸುತ್ತಿದ್ದ ಎಂದು ಕೂಡ ಹೇಳಲಾಗಿದೆ.
ರೈಲು ನಿಲ್ದಾಣದಲ್ಲಿ ನೀರು ತರುತ್ತೇನೆ ಅಂತ ಹೋದ ಪತ್ನಿ ಮತ್ತೊಬ್ಬನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಳು..!








