ಶಬರಿಮಲೆಯಲ್ಲಿ 6 ಅರ್ಚಕರು ಸೇರಿದಂತೆ 37 ಜನರಿಗೆ ಕೊರೊನಾ ಪಾಸಿಟಿವ್..!
ಶಬರಿಮಲೆ: ಕೊರೊನಾ ಆತಂಕ, ಬ್ರಿಟನ್ ವೈರಸ್ ಹಾವಳಿಯ ನಡುವೆಯೇ ಶಬರಿಮಲೆಯಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಶಬರಿಮಲೆ ಸನ್ನಿಧಾನಕ್ಕೆ ಮಕರವಿಳಕ್ಕು ಅವಧಿಯಲ್ಲಿ ಬರುವ ಭಕ್ತರ ಸಂಖ್ಯೆಯನ್ನೂ 5000ಕ್ಕೆ ಏರಿಸಲಾಗಿದೆ. ಎಷ್ಟೇ ಕಟ್ಟುನಿಟ್ಟಿನ ಕ್ರಮಗಳು, ಮುಂಜಾಗ್ರತೆಗಳನ್ನ ವಹಿಸಿದ್ರೂ ಸಹ ಕೊರೊನಾ ಹೆಮ್ಮಾರಿ ಆಘಾತ ನೀಡಿದೆ.
ಯುವ ಧೂಮಪಾನಿಗಳಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ: ಏನಂತೀರಾ..!
ಇದೀಗ ಶಬರಿಮಲೆಯಲ್ಲಿ 6 ಅರ್ಚಕರನ್ನೊಳಗೊಂಡಂತೆ 37 ಜನರಿಗೆ ಕೊರೊನಾ ಸೋಂಕು ಇರುವುದಾಗಿ ತಿಳಿದುಬಂದಿದೆ. ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ದೇವಸ್ಥಾನ ಆಡಳಿತ ಮಂಡಳಿಯು ಎಚ್ಚೆತ್ತುಕೊಂಡಿದೆ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಎಲ್ಲರನ್ನೂ ಐಸೊಲೇಷನ್ ನಲ್ಲಿರಿಸಲಾಗಿದೆ. ಜೊತೆಗೆ ಅವರ ಜೊತೆ ಕೆಲವು ದಿನಗಳಿಂದ ಸಂಪರ್ಕದಲ್ಲಿದ್ದವರಿಗೆ ತಕ್ಷಣವೇ ಕೊರೊನಾ ಪರೀಕ್ಷೆಗೆ ಒಳಪಡುವಂತೆ ತಿರುವನಂತಪುರಂ ಅಧಿಕಾರಿಗಳು ಸೂಚಿಸಿದ್ದಾರೆ.
ಅಪ್ರಾಪ್ತರು ಪ್ರೀತಿಯಲ್ಲಿ ‘ಅಂಧ’ರಾಗಿರುತ್ತಾರೆ ಅನ್ನೋದು ಇದಕ್ಕೆ ನೋಡಿ..!
ಅಂದ್ಹಾಗೆ ಶಬರಿಮಲೆಗೆ ಕೆಲವು ನಿಬಂಧನೆಗಳೊಂದಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಬರಿಮಲೆ ಪ್ರವೇಶಿಸುವವರು ಕನಿಷ್ಠ 48 ಗಂಟೆಗಳ ಮುನ್ನ ಪರೀಕ್ಷೆಗೊಳಗಾಗಿ ಕೋವಿಡ್ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಇತ್ತ ಸೋಂಕು ಕಾಣಿಸಿಕೊಂಡ ನಂತರವೂ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel