shabari male
ಕೊರೊನಾ ಸಂಕಷ್ಟದ ನಡುವೆ ಶಬರಿಮಲೆ ಯಾತ್ರಿಕರಿಗೆ ಮತ್ತೊಂದು ಭೀತಿ..!
ಕೇರಳ: ಕೊರೊನಾ ಹಾವಳಿಯ ನಡುವೆಯೂ ಶಬರಿಮಲೆಗೆ ಹೊರಟಿರುವ ಸ್ವಾಮಿ ಅಯ್ಯಪ್ಪನ ಭಕ್ತರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊರೊನಾ ಮಾರ್ಗಸೂಚಿಯಂತೆಯೇ ಎಲ್ಲಾ ನಿಯಮಗಳನ್ನ ಪಾಲಿಸಿ ಹೇಗೋ ಕಷ್ಟ ಪಟ್ಟು ಶಬರಿಮಲೆಗೆ ಹೊರಟಿರುವ ಭಕ್ತರು ಈಗ ಚಂಡಮಾರುತದ ಪ್ರಕೋಪವನ್ನ ಎದುರಿಸಬೇಕಾದ ಅಪಾಯ ಬಂದಿದೆ.
ಹೌದು ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಮತ್ತೊಂದು ಚಂಡಮಾರುತ ಅಪ್ಪಳಿಸಲಿದೆ. ಡಿಸೆಂಬರ್ 2 ಮತ್ತು 3ರಂದು ಕೇರಳದ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ.
ಇದರಿಂದ ಶಬರಿಮಲೆ ಯಾತ್ರಿಕರಿಗೆ ಕೊರೊನಾ ಸಂಕಷ್ಟದ ನಡುವೆ ವರುನಾಘಾತ ಎದುರಾಗಬಹುದಾದ ಪರಿಸ್ಥಿತಿ ಇದೆ. ಇನ್ನೂ ಅಯಪ್ಪನ ಭಕ್ತರಿಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇತ್ತ ಚಂಡಮಾರುತದ ಪರಿಣಾಮ ಯಾತ್ರಿಕರು ಅಯ್ಯಪ್ಪನ ದರ್ಶನಕ್ಕೆ ತೆರಳುವಾಗ ಗಾಳಿ ಮಳೆಯಿಂದ ತೊಂದರೆ ಅನುಭವಿಸುವ ಸಾಧ್ಯೆತೆಯಿದೆ. ವಾರದ ದಿನಗಳಲ್ಲಿ 1,000 ಮತ್ತು ವಾರಾಂತ್ಯದ ರಜಾ ದಿನಗಳಲ್ಲಿ 2,000 ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಈಗ ಚಂಡಮಾರುತದ ಅಬ್ಬರ ಶುರುವಾದರೆ ದೇವಸ್ಥಾನ ಸಿಬ್ಬಂದಿ, ಪೊಲೀಸರು ಮತ್ತು ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಲಾಗಿದೆ.
ಮಹಲಿಂಗಪುರ ಪುರಸಭೆ ತಳ್ಳಾಟ ಪ್ರಕರಣ: ಸದಸ್ಯೆ ಹೊಟ್ಟೆಯಲ್ಲೇ ಪ್ರಾಣಬಿಟ್ಟಿದೆ ಮಗು..!
ಇತ್ತ ಕೇರಳ ಅಷ್ಟೇ ಅಲ್ದೇ ದಕ್ಷಿಣ ಭಾರತದ ಅನೇಕ ಭಾಗಗಳಿಗೂ ಚಂಡಮಾರುತದ ಪ್ರಭಾವ ಬೀರಲಿದೆ ಎನ್ನಲಾಗಿದೆ. ಇನ್ನೂ ಕೇರಳದ ಕೊಲ್ಲಂ, ಪಟ್ನಂತಿಟ್ಟ , ತಿರುವನಂತಪುರಂ, ಅಳಪ್ಪುಳ ಜಿಲ್ಲೆಗಳಲ್ಲಿ ಡಿ. 3ರಂದು 20 ಸೆಂ.ಮೀ.ಗೂ ಅಧಿಕ ಮಳೆ ಬೀಳಬಹುದು ಎಂದು ಹೇಳಲಾಗಿದೆ. ಈ ಹಿನ್ನೆಲೆ ಈ ಭಾಗಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.
shabari male
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel