ಹಸ್ತಿನಾಪುರದ ಮಹಾರಾಜ ಪಾಂಡು ಪತ್ನಿ, ಪಾಂಡವರ ತಾಯಿ ಮಹಾಭಾರತದಲ್ಲಿ ಬರುವ ಬಹುಮುಖ್ಯ ಪಾತ್ರವೇ ಕುಂತಿ. ಅಂತಹ ಕುಂತಿಯ ಪಾತ್ರವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಪೌರಾಣಿಕ ಧಾರಾವಾಹಿಯಲ್ಲಿ ಪರವಶ ಮಾಡಿಕೊಂಡು ನಿಭಾಯಿಸುತ್ತಿರುವ ಪಾತ್ರಧಾರಿಯ ನಿಜವಾದ ಹೆಸರು ಶಫಾಕ್ ನಾಜ್.
ಬಾಲ್ಯ ಮತ್ತು ವಿದ್ಯಾಭ್ಯಾಸ:
ಶಫಾಕ್ ನಾಜ್ ( 27 ) ಅವರು ಮೂಲತಃ ಮಹಾರಾಷ್ಟ್ರದ ಮುಂಬೈನವರು. ಜನಿಸಿದ್ದು 7.ಫೆಬ್ರವರಿ 1993ರಲ್ಲಿ
ಶಫಾಕ್ ನಾಜ್ ಅವರು ವೃತ್ತಿಪರ ಮಾಡಲ್, ನಟಿ ಹಾಗೂ ಮುಖ್ಯವಾಗಿ ಟ್ರೈನಡ್ ಕತಕ್ ಡ್ಯಾನ್ಸರ್.
ಸಹೋದರರು – ಶೀಜನ್, ಶಬೀರ್, ಅಕ್ಕ- ಫಲಕ್ ನಾಜ್
ಶಫಾಕ್ ನಾಜ್ ತಮ್ಮ ಅಕ್ಕ ಫಲಕ್ ನಾಜ್ ಅವರೊಂದಿಗೆ ಉತ್ತಮ ಬಾಂಧವ್ಯವಿದೆ.
ವಿದ್ಯಾಭದಯಾಸವನ್ನು ತಮ್ಮ ಗ್ರಾಮದಲ್ಲೇ ಮುಗಿಸಿಕೊಂಡಿರುವ ಶಫಾಕ್ ಪದವಿದಾರರಾಗಿದ್ದಾರೆ.
ಆಕ್ಟಿಂಗ್ ಕೆರಿಯರ್:
2010ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದ ಬಾಬುಲ್ ಕ ಬಿದಾಯಿ ಧಾರಾವಾಹಿಯಲ್ಲಿ ಬಣ್ಣ ಹಚ್ಚುವ ಮೂಲಕ ಶಫಾಕ್ ಅವರು ಕಿರುತೆರೆಗೆ ಪಾದರ್ಪಣೆ ಮಾಡಿದ್ದರು. 2017ರಲ್ಲಿ ಗೆಸ್ಟ್ ಇನ್ ಲಂಡನ್ ಚಿತ್ರದಲ್ಲಿ ನಟಿಸುವ ಮೂಲಕ ಬಿಗ್ ಸ್ಕ್ರೀನ್ ಎಂಟ್ರಿಕೊಟ್ಟಿದ್ದರು ಶಫಾಕ್ ನಾಜ್.
ಇದರ ಹೊರತಾಗಿ ಕಾಮಿಡಿ ಶೋ ಚಿಡಿಯಾ ಘರ್ ನಲ್ಲಿ ಮಯೂರಿಯಾಗಿ ಮಿಂಚಿದ್ದಾರೆ. ಬಳಿಕ 2013ರಲ್ಲಿ ತೆರೆಕಂಡ ಪೌರಾಣಿಕ ಧಾರಾವಾಹಿಯಲ್ಲಿ ಪಾಂಡವರ ತಾಯಿ ಕುಂತಿಯಾಗಿ ನಟಿಸಿ ಮನೆಮಾತಾಗಿದ್ದಾರೆ.ಧಾರವಾಹಿಗಳ ಹೊರತಾಗಿ ಸಾವ್‍ಧಾನ್ ಇಂಡಿಯಾ, ಗುಮ್ರಾಹ್, ಕ್ರೈಂ ಪೆಟ್ರೋಲ್, ಫಿಯರ್ ಫೈಲ್ಸ್, ಅದಾಲತ್ ಶೋಗಳಲ್ಲು ಕಾಣಿಸಿಕೊಂಡಿದ್ದಾರೆ. ಮಡ್ವೆಂಚರ್ಸ್ ನಲ್ಲಿ ಪ್ರತಿಯೋಗಿಯಾಗಿಯೂ ಭಾಗವಿಸಿದ್ದರು.
2011ರಲ್ಲಿ ಲಕ್ಷ್ಮೀ, 2012ರಲ್ಲಿ ಶುಭ ವಿವಾಹ್, ತೇರಿ ಮೇರಿ ಲವ್ ಸ್ಟೋರೀಸ್, ಲವ್ ಮಾರೇಜ್ ಯಾ ಅರೇಂಜ್ ಮ್ಯಾರೇಜ್, ಮಹಾಕಾಳಿ ಅಂತ್ ಹಿ ಆರಂಭ್ ಹೇ, ಕುಲ್ಫಿ ಕುಮಾರ್ ಭಾಗೇವಾಲಾ, ಲಾಲ್ ಇಷ್ಕ್, ವಿಕ್ರಮ್ ಬೇತಾಳ್ ಕಿ ರಹಸ್ಯ ಗಾಥಾದಲ್ಲೂ ಬಣ್ಣ ಹಚ್ಚಿದ್ದಾರೆ. ಮುಖ್ಯವಾಗಿ 2019ರಲ್ಲಿ ವೆಬ್ ಸೀರಿಸ್ ಹಲಾಲದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು, ಮುಷ್ಕಿಲ್ ವೆಬ್ ಸೀರೀಸ್ ನಲ್ಲು ಕಾಣಿಸಿಕೊಂಡಿದ್ದಾರೆ.
ನಟಿಯಾಗಬೇಕು ಎಂಬ ಕನಸು ಹೊತ್ತಿದ್ದ ಶಫಾಕ್ ಅವರು ಮೀರತ್ ನಿಂದ ತನ್ನ ಅಕ್ಕನ ಜೊತೆಗೆ ಮಾಯಾ£ಗರಿ ಮುಂಬೈಗೆ ಎಂಟ್ರಿಕೊಟ್ಟಿದ್ದರು. ತಮ್ಮ ಕನಸನ್ನು ನನಸು ಮಾಡಿಕೊಳ್ಲಲು ಹಗಲು ರಾತ್ರಿ ಶ್ರಮಿಸುತ್ತಿದ್ದ ಶಫಾಕ್ ಪ್ರತಿ ದಿನ 6-7 ಆಡಿಷನ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದರು. ಖ್ಯಾತ ನರ್ತಕಿ ಸರೋಜ್ ಖಾನ್ ಅವರಿಂದ ಕತಕ್ ನೃತ್ಯ ತರಬೇತಿ ಪಡೆದಿದ್ದಾರೆ ಶಫಾಕ್. 








