ವಿರಾಟ್ – ಜಡೇಜಾ ಪಠಾಣ್ ಡ್ಯಾನ್ಸ್ ಗೆ ಪ್ರತಿಕ್ರಿಯಿಸಿದ ನಟ ಶಾರುಖ್ ಖಾನ್….
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಾರುಖ್ ಖಾನ್ ನಟನೆಯ ಪಠಾಣ್ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮುರಿಯುವ ಬ್ಲಾಕ್ ಬಸ್ಟರ್ ಚಿತ್ರವಾಗಿ ಯಶಸ್ಸು ಕಂಡಿದೆ. ನಟ ಕಿಂಗ್ ಖಾನ್ ಟ್ವೀಟರ್ ನಲ್ಲಿ ಆಸ್ಕ SRK ಟ್ವೀಟರ್ ಹ್ಯಾಶ್ ಟ್ಯಾಗ್ ಪ್ರಾರಂಭಿಸಿ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ.
ಇದರಲ್ಲಿ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಪಠಾಣ್ ಡ್ಯಾನ್ಸ್ ಬಗ್ಗೆ ಕೇಳಿದ್ದಾರೆ. ಇದಕ್ಕೆ ನಟ ಶಾರುಖ್ ಖಾನ್ ಅವರಿಂದ ಡ್ಯಾನ್ಸ್ ಕಲಿಯಬೇಕು ಎಂದು ಹೇಳಿದ್ದಾರೆ. “ಅವರು ನನಗಿಂತ ಚೆನ್ನಾಗಿ ಮಾಡುತ್ತಿದ್ದಾರೆ!! ಅದನ್ನು ವಿರಾಟ್ ಮತ್ತು ಜಡೇಜಾ ಅವರಿಂದ ಕಲಿಯಬೇಕು!!!” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಕ್ರಿಕೆಟ್ ಕುರಿತು ಮಾತನಾಡುವುದಾರೇ ಭಾರತ ಇದೀಗ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಫೆಬ್ರವರಿ 17 ರಿಂದ ಪ್ರಾರಂಭಿಸಲಿದೆ.
Shah Rukh Khan: Actor Shah Rukh Khan reacts to Virat – Jadeja Pathan dance….








