Shah Rukh Khan : ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಅವರನ್ನ ತಡೆದ ಕಸ್ಟಮ್ ಅಧಿಕಾರಿಗಳು..
ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನ ಕಸ್ಟಮ್ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ನಟ ಶಾರುಖ್ ಖಾನ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಿಂದ ಆಗಮಿಸುತ್ತಿದ್ದಾಗ 18 ಲಕ್ಷ ರುಪಾಯಿ ಮೌಲ್ಯದ ದುಬಾರಿ ವಾಚ್ ಕವರ್ ಗಳನ್ನ ಹೊಂದಿದ್ದರು ಎನ್ನಲಾಗಿದ್ದು, ಇದಕ್ಕಾಗಿ 6.83 ಲಕ್ಷ ಕಸ್ಟಮ್ ಸುಂಕವನ್ನ ಪಾವತಿಸಬೇಕಾಗಿತ್ತು ಎಂದು ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಮೂಲಗಳ ಪ್ರಕಾರ ತಿಳಿದು ಬಂದಿದೆ.
ನಟ ಶಾರುಖ್ ಖಾನ್ ದಂಡವನ್ನ ಪಾವತಿಸಿ ಅಧಿಕಾರಿಗಳಿಗೆ ಸಹಕರಿಸಿದ್ದಾರೆ ಎನ್ನಲಾಗಿದೆ.
ಶಾರ್ಜಾದಲ್ಲಿ ನಡೆದ 41 ನೇ ಶಾರ್ಜಾ ಇಂಟರ್ನ್ಯಾಷನಲ್ ಬುಕ್ ಫೇರ್ (SIBF) ಕಾರ್ಯಕ್ರಮದಲ್ಲಿ ಭಾಗವಹಿಸಿ ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ವಾಪಸ್ ತೆರಳುವಾಗ ಈ ಘಟನೆ ನಡೆದಿದೆ.
ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆಯನ್ನ ಗೌರವಿಸಿ ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನಿರೂಪಣೆ ಪ್ರಶಸ್ತಿಯನ್ನು ಶಾರುಖ್ ಖಾನ್ ಗೆ ಪ್ರಧಾನ ಮಾಡಲಾಯಿತು.
Shah Rukh Khan: Customs officers stopped Shah Rukh Khan at the airport..








