shaheer sheikh
ಶಾಹೀರ್ ಶೇಖ್.. ಈ ಹೆಸರು ಅಷ್ಟಾಗಿ ಜನರಿಗೆ ಗೊತ್ತಾಗೋದಿಲ್ಲ. ಆದ್ರೆ ಅರ್ಜುನ ಅಂದಾಕ್ಷಣ ಕಿರುತೆರೆಯ ಪೌರಾಣಿಕ ಧಾರಾವಾಹಿ ಮಹಾಭಾರತದಲ್ಲಿ ಮಿಂಚಿ ಜನಪ್ರಿಯತೆ ಗಳಿಸಿರುವ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್ ಕಣ್ಣೆದುರಿಗೆ ಬರುತ್ತಾರೆ. ಹೀಗೆ ಕಿರುತೆರೆಯಲ್ಲಿ ಅತಿ ಹೆಚ್ಚು ಮೈಥಾಲಾಜಿಕ್ ಪಾತ್ರದಲ್ಲೇ ಮಿಂಚಿರುವ ಸಾಹೀರ್ ಇದೀಗ ವೆಬ್ ದುನಿಯಾಗೆ ಕಾಲಿಟ್ಟಿದ್ದಾರೆ.
ಮಹಾಭಾರತದ ಅರ್ಜುನ ಪಾತ್ರದ ಮೂಲಕ ಶಾಹೀರ್ ಶೇಖ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ. ‘ಮಹಾಭಾರತ’ ಧಾರಾವಾಹಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಶಾಹೀರ್ ಸದ್ಯ ಕಡೆಯದಾಗಿ ‘ಯೇ ರಿಶ್ತಾ ಹೇ ಪ್ಯಾರ್ ಕಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಈ ಧಾರಾವಾಹಿ ಮುಕ್ತಾಯವಾಗಿದೆ.
ಮೂಲತಹ ಕಾಶ್ಮೀರದವರಾದ ಶಾಹೀರ್ 2009ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಹೀರ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು 2014ರಲ್ಲಿ ಬಂದ ‘ಮಹಾಭಾರತ’ ಧಾರಾವಾಹಿಯ ಅರ್ಜುನ ಪಾತ್ರ. ಶಾಹೀರ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಹೌದು, ಶಾಹೀರ್ ಮೊದಲ ಬಾರಿಗೆ ವೆಬ್ ಸೀರಿಸ್ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯ ನಟನಾಗಿ ಗುರುಸಿಕೊಂಡಿರುವ ಶಾಹೀರ್ ಬಾಲಿವುಡ್ ನ ಸಾಕಷ್ಟು ಸಿನಿಮಾ ಆಫರ್ ಗಳನ್ನು ರಿಜೆಕ್ಟ್ ಮಾಡಿದ್ದಾರೆ. ಆದರೀಗ ವೆಬ್ ಸೀರಿಸ್ ನಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ.

‘ಪೌರಶ್ ಪುರ್’ ಹೆಸರಿನ ವೆಬ್ ಸೀರಿಸ್ ನಲ್ಲಿ ಶಾಹೀರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೆಬ್ ಸೀರಿಸ್ ನಲ್ಲಿ ಶಾಹೀರ್ ಜೊತೆ ಮಿಲಿಂದ್ ಸೋಮನ್ ಮತ್ತು ಶಿಲ್ಪಾ ಶಿಂಧೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
shaheer sheikh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








