ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಈಗ ಎಲ್ಲರ ಮನೆಮಾತಾಗಿದೆ. ಮಹಾಭಾರತದಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಪಾತ್ರಧಾರಿಗಳು ಈಗ ಎಲ್ಲರ ಫೇವರೇಟ್ ಆಗಿದ್ದಾರೆ. ಅದ್ರಲ್ಲೂ ಮಧ್ಯಮ ಪಾಂಡವನಾಗಿ, ಮಹಾನ್ ಧನುರ್ಧಾರಿಯಾಗಿ ಎಲ್ಲರ ಅಚ್ಚುಮೆಚ್ಚಾಗಿರುವ ಅರ್ಜುನ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗಾದ್ರೆ ಅರ್ಜುನನ ಪಾತ್ರದಲ್ಲಿ ನಟಿಸಿರೋರು ಯಾರು.? ಎಲ್ಲಿಯವರು..? ಇದೆಲ್ಲ ತಿಳ್ಕೊಳ್ಬೇಕು ಎನ್ನುವ ಕ್ಯೂರಿಯಾಸಿಟಿ ಇದ್ಯಾ..? ಹಾಗಾದ್ರೆ ಈ ಸ್ಟೋರಿ ನೋಡಿ…
ಬಾಲ್ಯ
ಮಹಾಭಾರತದಲ್ಲಿ ಧನುರ್ಧಾರಿಯಾಗಿ ಮಿಂಚುತ್ತಿರುವ ಅರ್ಜುನನ ನಿಜವಾದ ಹೆಸರು ( 36)ಶಾಹೀರ್ ಶೇಖ್ . ಆದ್ರೆ ಇವರ ಮೂಲ ಹೆಸರು ಶೇಖ್ ಶಾಹೀರ್ ನರವಾಜ್. ಮೂಲತಹ ಜಮ್ಮುವಿನ ದೊಡಾ ಜಿಲ್ಲೆಯವರಾದ ಶಾಹೀರ್ ಮಾರ್ಚ್ 26ರ 1984 ರಲ್ಲಿ ಜನಿಸಿದ್ದು. ಇವರ ತಂದೆ ಶಾ ನವಾಜ್ ಶೇಖ್, ತಾಯಿ ದಿಲ್ಶಾದ್ ಶೇಖ್, ತಮ್ಮ ರಯೀಸ್ ಶೇಖ್, ತಂಗಿ ಅಲೀಫಾ ಶೇಖ್.
ವಿಧ್ಯಾಭ್ಯಾಸ
ಶಾಹೀರ್ ಜಮ್ಮುವಿನ ಹರಿ ಸಿಂಗ್ ಹೈ ಸ್ಕೂಲ್ ನಲ್ಲಿ ಪ್ರಾಥಮಿಕ ಹಂತದ ವಿಧ್ಯಾಭ್ಯಾಸ ಮುಗಿಸಿಕೊಂಡಿದ್ದಾರೆ. ಇದಾದ ಬಳಿಕ ಮಹಾರಾಷ್ಟ್ರದ ಪುಣೆಯಲ್ಲಿ ಭಾರತಿ ವಿದ್ಯಾಪೀಠ ವಿವಿಯಲ್ಲಿ ಎಲ್ ಎಲ್ ಬಿ ಪದವಿ ಪಡೆದುಕೊಂಡಿದ್ದಾರೆ. ಎಲ್ ಎಲ್ ಬಿ ಪದವಿದಾರರಾದರೂ ಶಾಹೀರ್ ಈ ಕ್ಷೇತ್ರದಲ್ಲಿ ಮುಂದುವರೆಯದೇ ಛಾಯಾಗ್ರಣದಲ್ಲಿ ತಮ್ಮ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಇದಾದ ನಂತರ ಫೋಟೋಗ್ರಾಫರ್ ಆಗಿ ಕೆಲ ಕಾಲ ಕಾರ್ಯ ನಿರ್ವಹಿಸಿ ಮೋಹಕ ಲೋಕ ಅಂದ್ರೆ ಮಾಡಲಿಂಗ್ ಜತ್ತಿಗೆ ಎಂಟ್ರಿ ಕೊಡ್ತಾರೆ.
ಕಿರುತೆರೆ ಜರ್ನಿ
ಹೀಗೆ ತಮ್ಮ ನಟನಾ ಆಸಕ್ತಿಯನ್ನ ಬೆನ್ನಟ್ಟಿ ಹೋದ ಶಾಹೀರ್ 2005 ರಲ್ಲಿ ಸಾನ್ಯ ಎನ್ನುವ ಟಿಲಿವಿಷನ್ ಶೋನಲ್ಲಿ ಅರ್ಜುನ್ ಶೆಖಾವತ್ ಆಗಿ ನಟಿಸುವ ಮೂಲಕ ಮೊದಲ ಬಾರಿಗೆ ಕಿರುತೆಗೆ ಎಂಟ್ರಿ ಕೊಟ್ರು. ಇದಾದ ಬಳಿಕ ಝಾನ್ಸಿ ರಾಣಿ, ತೇರಿ ಮೇರಿ ಲವ್ ಸ್ಟೋರೀಸ್ ನಂತಹ ಹಲವಾರು ಧಾರಾವಾಹಿಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟನೆ ಮಾಡಿದ್ರು.
ಸ್ಟಾರ್ ಪಟ್ಟ
ಆದ್ರೆ 2013 ರಲ್ಲಿ ಹಿಂದಿಯಲ್ಲಿ ತೆರೆಕಂಡ ಸ್ವಸ್ತಿಕ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ಮಹಾಭಾರತದಲ್ಲಿ ಶಾಹೀರ್ ಅರ್ಜುನನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲಿಗಲ್ಲಾಯ್ತು. ಮಧ್ಯಮ ಪಾಂಡವನಾಗಿ ನಟಿಸಿದ ಶಾಹೀರ್ ಅಭಿನಯಕ್ಕೆ ಜನರು ಫಿದಾ ಆಗಿದ್ರು.
ಇದರ ಹೊರತಾಗಿ ನವ್ಯಾ, ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ , ದಾಸ್ತಾ ಎ ಮೊಹಬ್ಬತ್ತೇ ಅಲ್ಲಿ ಅನಾರ್ಕಲಿಯ ಸಲೀಮ್ ಆಗಿ, ಎ ರಿಶ್ತೇ ಹೇ ಪ್ಯಾರ್ ಕೇ ಹೀಗೆ ಅನೇಕ ದಾರವಾಹಿಗಳಲ್ಲಿ ನಟಿಸಿ ಜನಮಣ್ಣನೆ ಪಡೆದ ಶಾಹೀರ್ ಹಿಂದಿ ಅಲ್ದೇ ಇಂಡೋನೇಷ್ಯಾದ ಹಲವಾರು ಡ್ರಾಮಾಗಳಲ್ಲೂ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅವಾರ್ಡ್ಸ್
ಇನ್ನೂ ತಮ್ಮ ಅದ್ಭುತ ನಟನೆಯಿಂದ ಶಾಹೀರ್ ಅನೇಕ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ನವ್ಯಾ, ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ, ಹೀಗೆ ಅನೇಕ ಶೋಗಳಲ್ಲಿ ತಮ್ಮ ಅತ್ಯುತ್ತಮ ನಟನೆಯಿಂದಲೇ ಹತ್ತು ಹಲವು ಅವಾರ್ಡ್ಸ್ ಗೆದ್ದ ಶಾಹೀರ್ ಅವರು ಮಹಾಭಾರತದಲ್ಲಿ ಉತ್ತಮ ನಟ ಹಾಗೂ ಪಾಪ್ಯುಲರ್ ಆಕ್ಟರ್ ಅವಾರ್ಡ್ ಗೆ ನೋಮಿನೆಟ್ ಸಹ ಆಗಿದ್ದರು.
ಲವ್ ಅಫೇರ್
ಮೂಲಕ ಪ್ರಕಾರ ಶಾಹೀರ್ ಶೇಖ್ ಇಂಡೋನೇಷ್ಯಾದ ಗಾಯಕಿ ಆಯು ಟಿಂಗ್ ಟಿಂಗ್ ಜೊತೆಗೆ ಲವ್ ಅಫೇರ್ ಹೊಂದಿದ್ದರು. ಆದ್ರೆ ಕಾರಣಾಂತರಗಳಿಂದ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನುವ ವದಂತಿ ಇದೆ. ಇದರ ನಡುವೆ ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಅಲ್ಲಿ ಸಹನಟಿಯಾಗಿ ಅಭಿನಯಿಸಿರುವ ಎರಿಕಾ ಫರ್ನಾಂಡಿಸ್ ಜೊತೆ ಶೇಖ್ ಪ್ರೇಮ ಬಲೆಯಲ್ಲಿ ಸಿಲುಕಿದ್ದಾರೆಂಬ ಗಾಸಿಫ್ ಸಹ ಇದೆ.