ಕೊರೋನಾ ವೈರಸ್‍ನಿಂದ ಶಾಹೀದ್ ಆಫ್ರಿದಿ ಚೇತರಿಕೆ…!
ಕೋವಿಡ್-19 ಸೋಕಿನಿಂದ ಬಳಲುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಆಫ್ರಿದಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲ ಎರಡು ಮೂರು ದಿನ ತುಂಬಾ ಕಷ್ಟಕರವಾಗಿತ್ತು. ಆದ್ರೆ ಈಗ ನಾನು ಚೇತರಿಸಿಕೊಳ್ಳುತ್ತಿರುವುದಾಗಿ ಶಾಹೀದ್ ಆಫ್ರಿದಿ ಅವರು ವಿಡಿಯೋ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಕೊರೋನಾ ವೈರಸ್‍ನಿಂದಾಗಿ ಸಂಕಷ್ಟಕ್ಕಿಡಾಗಿದ್ದ ಜನರಿಗೆ ಶಾಹೀದ್ ಆಫ್ರಿದಿ ಅವರು, ತನ್ನ ಶಾಹೀದ್ ಆಫ್ರಿಧಿ ಪೌಂಡೇಶನ್ ಮೂಲಕ ನೆರವಿನ ಹಸ್ತ ನೀಡಿದ್ದರು. ಅಲ್ಲದೆ ಕೊರೋನಾ ವಾರಿಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಕಳೆದ ವಾರ ಅವರು ಕೋವಿಡ್ 19 ಟೆಸ್ಟ್‍ಗೆ ಒಳಪಟ್ಟಾಗ ಸೋಂಕು ಪತ್ತೆಯಾಗಿತ್ತು.
ನಾನು ಈ ವಿಡಿಯೋ ಮಾಡುವುದರ ಮುಖ್ಯ ಉದ್ದೇಶ ಏನು ಅಂದ್ರೆ, ನನ್ನ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಅಭಿಮಾನಿಗಳು ಕಾಳಜಿ ವಹಿಸಿದ್ದರು. ನಾನು ಈಗ
ಚೇತರಿಸಿಕೊಳ್ಳುತ್ತಿದ್ದೇನೆ. ಆದ್ರೆ ನನಗೆ ನನ್ನ ಮಕ್ಕಳ ಆರೈಕೆ ಮಾಡಲು ಆಗುತ್ತಿಲ್ಲ. ಅವರನ್ನು ತಬ್ಬಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ನನ್ನ ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಂಡು ಅವರ ಆರೋಗ್ಯದ ಕಡೆಗೂ ಗಮನ ಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೊರೋನಾ ವೈರಸ್ ಬಗ್ಗೆ ಯಾರು ಗಾಬರಿಪಟ್ಟುಕೊಳ್ಳುವ ಅಗತ್ಯವಿಲ್ಲ. ನೀವು ಅದರ ವಿರುದ್ಧ ಹೋರಾಟ ನಡೆಸದೇ ಇದ್ರೆ ಅದನ್ನು ಸೋಲಿಸಲು ಸಾಧ್ಯವಿಲ್ಲ. ಹಾಗೇ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವಂತೆ ಶಾಹೀದ್ ಆಫ್ರಿದಿ ಹೇಳಿಕೊಂಡಿದ್ದಾರೆ.
ಇನ್ನು ಶಾಹೀದ್ ಆಫ್ರಿದಿ ಮಾತು ಮುಂದುವರಿಸುತ್ತಾ, ನನಗೆ ರಿಸ್ಕ್ ಅಂತ ಮೊದಲೇ ಗೊತ್ತಿತ್ತು. ಜನರ ನೆರವಿನ ಧಾವಿಸಿರುವುದರಿಂದ ನನಗೂ ಸೋಂಕು ಹರಡಬಹುದು ಎಂಬುದ ಗೊತ್ತಿತು. ಆದ್ರೆ ಅದು ಸ್ವಲ್ಪ ತಡವಾಗಿ ಪತ್ತೆಯಾಯ್ತು. ಒಂದು ವೇಳೆ ಮೊದಲೇ ಹರಡುತ್ತಿದ್ರೆ ನನಗೆ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಬಡ ಜನರ ನೆರವಿಗೆ ಧಾವಿಸಿ ಅಂತ ಶಾಹೀದ್ ಆಫ್ರಿದಿ ಅವರು ಮನವಿ ಮಾಡಿಕೊಂಡಿದ್ದಾರೆ.








