Shahir Sheikh
ಶಾಹಿರ್ ಶೇಖ್.. ಹೀಗೆ ಅನ್ನೋಕ್ಕಿಂತ ‘ಅರ್ಜುನ’ ಅಂದತಕ್ಷಣ ಥಟ್ ಅಂತ ಕಣ್ಮುಂದೆ ಬರೋದೆ ಮಹಾಭಾರತ ಧಾರಾವಹಿಯ ಅರ್ಜುನ. ಸದ್ಯ ಕಿರುತೆರೆ ಮಹಾಬಾರತದಲ್ಲಿ ಅರ್ಜುನನಾಗಿ ಮಿಂಚಿರುವ ಶಾಹೀರ್ ಶೇಖ್ ನಟನೆ ಅಷ್ಟೇ ಅಲ್ದೇ ಲುಕ್ಸ್ ಗೂ ಅಷ್ಟೇ ಪ್ರಸಿದ್ಧಿ ಪಡೆದಿರುವ ನಟ. ಯುವತಿಯರ ಹಾಟ್ ಫೇವರೇಟ್ ಆಗಿರುವ ಶಾಹೀರ್ ಇಂದು ತಮ್ಮ ಪ್ರೇಯಸಿಯನ್ನ ಅಧಿಕೃತವಾಗಿ ಪರಿಚಯಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನಿಡಿದ್ದಾರೆ.
‘777 ಚಾರ್ಲಿ’ ಗೆ ತಮಿಳು ‘ಸಿಂಹ’ನ ಎಂಟ್ರಿ: ರಕ್ಷಿತ್ ಹೇಳಿದ್ದೇನು..!
ಶಾಹೀರ್ ಪ್ರೇಯಸಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅಲ್ಲದೇ ಸಾಕಷ್ಟು ನಟಿಯರ ಜೊತೆ ಶಾಹೀರ್ ಹೆಸರು ತಳಕುಹಾಕಿಕೊಂಡಿತ್ತು. ಆದರೀಗ ಶಾಹೀರ್ ಗರ್ಲ್ ಫ್ರೆಂಡ್ ಪರಿಚಯಿಸಿ ಎಲ್ಲಾ ಗಾಸಿಪ್ ಗಳಿಗೆ ತೆರೆಎಳೆದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರೇಯಸಿ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತವಾಗಿ ಪ್ರೀತಿ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ಶಾಹೀರ್ ಪ್ರೇಯಸಿಯ ಹೆಸರು ರುಚಿಕಾ ಕಪೂರ್. ಸ್ಟುಡಿಯೋ ಕಾರ್ಯನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ರುಚಿಕಾ ಹಾಗೂ ಶಾಹೀರ್ ಇಬ್ಬರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ.
ಗರ್ಲ್ ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡ ಕ್ರಿಕೆಟಿಗ ಕೆ ಎಲ್ ರಾಹುಲ್..!
ಸದ್ಯ ಶಾಹೀರ್ ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭಾಷಯ ಕೋರುತ್ತಿದ್ದಾರೆ. ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬರುತ್ತಿದೆ. ಕಿರುತೆರೆ ಗಣ್ಯರು ಸಹ ಅಭಿನಂದನೆ ತಿಳಿಸುತ್ತಿದ್ದಾರೆ. ಮೂಲತಹ ಕಾಶ್ಮೀರದವರಾದ ಶಾಹೀರ್ 2009ರಲ್ಲಿ ಕಿರುತೆರೆ ಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಆದ್ರೆ ಶಹೀರ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು 2014ರಲ್ಲಿ ಬಂದ ‘ಮಹಾಭಾರತ’ ಧಾರಾವಾಹಿಯ ಅರ್ಜುನ ಪಾತ್ರ. ಮಹಾಭಾರತ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ನಟ ಪ್ರಸ್ತುಕ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಇತ್ತೀಚೆಗೆ
ವೆಬ್ ಸೀರಿಸ್ ಲೋಕಕ್ಕೂ ಕಾಲಿಟ್ಟಿದ್ದಾರೆ.
Shahir Sheikh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel