ನಾಚಿಕೆ ಆಗ್ಬೇಕು.. ಗಂಗೂಲಿ ವಿರುದ್ಧ ಆಕ್ರೋಶ Ganguly saaksha tv
ಬೆಂಗಳೂರು : ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕೆಟ್ಟ ರಾಜಕೀಯಗಳನ್ನು ಸೈಡಿಗಿಟ್ಟು, ತಂಡಕ್ಕೆ ಉಪಯುಕ್ತವಾಗುವ ಆಲೋಚನೆಗಳನ್ನು ಮಾಡಿ ಎಂದು ಖಾರವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ವಾಸ್ತವಾಗಿ ಸಮಸ್ಯೆ ಇರೋದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಧ್ಯೆ ಅಲ್ಲ. ಬಿಸಿಸಿಐ ಬಿಗ್ ಬಾಸ್ ಗಳ ಸ್ವಾರ್ಥದಿಂದಲೇ ಟೀಂ ಇಂಡಿಯಾ ಗೊಂದಲದ ಗೂಡಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಚುಟುಕು ಕ್ರಿಕೆಟ್ ನ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬಳಿಕ ಏಕದಿನ ಸಾರಥ್ಯದಿಂದಲೂ ಅವರನ್ನ ವಜಾಗೊಳಿಸಲಾಯಿತು. ಸೀಮಿತ ಓವರ್ ಗಳ ಕ್ರಿಕೆಟ್ ಗೆ ಒಬ್ಬರೇ ಕ್ಯಾಪ್ಟನ್ ಇರಬೇಕು ಎಂದು ಆಯ್ಕೆ ಸಮಿತಿ ಅಭಿಪ್ರಾಯಟ್ಟಿದ್ದು, ರೋಹಿತ್ ಶರ್ಮಾಗೆ ನಾಯಕತ್ವ ವಹಿಸಲಾಗಿದೆ ಎಂದು ಸೌರವ್ ಗಂಗೂಲಿ ಹೇಳಿದ್ದರು. ಅಷ್ಟೆ ಅಲ್ಲದೇ ನಾಯಕತ್ವದಿಂದ ಕೆಳಗಿಳಿಯಬೇಡ ಎಂದು ಕೊಹ್ಲಿಗೆ ಮನವಿ ಮಾಡಿದ್ದರೂ, ವಿರಾಟ್ ನನ್ನ ಮಾತು ಕೇಳಲಿಲ್ಲ ಎಂದು ಸೌರವ್ ಹೇಳಿದ್ದರು.
ಆದ್ರೆ ಗಂಗೂಲಿ ಅವರ ಈ ಹೇಳಿಕೆಯನ್ನು ವಿರಾಟ್ ಕೊಹ್ಲಿ ಖಂಡಿಸಿದ್ದು, ಸೌರವ್ ಗಂಗೂಲಿ ಅವರು ನನ್ನ ಬಳಿ ಯಾವುದೇ ಚರ್ಚೆ ನಡೆಸಿಲ್ಲ. ರೋಹಿತ್ ಜೊತೆ ನನಗೆ ಯಾವುದೇ ಭಿನ್ನಾಭಿಪ್ರಾಯಗಳಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಸೌರವ್ ಗಂಗೂಲಿ, ಬಿಸಿಸಿಐ ಸೆಕ್ರೆಟರಿ ಜೈ ಶಾ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ನಾಚಿಕೆ ಆಗಬೇಕು. ಕೀಳುಮಟ್ಟದ ರಾಜಕೀಯದಿಂದ ಟೀಂ ಇಂಡಿಯಾವನ್ನು ಹಾಳು ಮಾಡಬೇಡಿ ಎಂದು ಗರಂ ಆಗಿದ್ದಾರೆ.
ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಆ ಪದವಿಗೆ ತಕ್ಕಂತೆ ವರ್ತನೆ ಮಾಡಿ ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇನ್ನು ವಿರಾಟ್ ಅಭಿಮಾನಿಗಳು.. ಭಾಯ್ ದೊಡ್ಡ ಬಾಂಬ್ ಹಾಕಿದ್ದಾರೆ. ಯಾರ ಮಾತು ಸುಳ್ಳು ಯಾರ ಮಾತು ನಿಜ ಎಂಬೋದನ್ನ ಕಡ್ಡಿ ಮುರಿದಂತೆ ಸ್ಪಷ್ಟಡಿಸಿದ್ದಾರೆ. ಅಲ್ಲದೇ ಸೌರವ್ ಗಂಗೂಲಿ ಮತ್ತು ಜೈ ಶಾರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಗಂಗೂಲಿ ಅಭಿಮಾನಿಗಳು ಕೂಡ ಟ್ವಿಟ್ಟರ್ ನಲ್ಲಿ ಟಕ್ಕರ್ ನೀಡುತ್ತಿದ್ದಾರೆ.









