ಟೆಸ್ಟ್ ಸರಣಿ : ಅವಿಸ್ಮರಣೀಯ ಸಾಧನೆಯತ್ತ ಶಮಿ
ಬೆಂಗಳೂರು : ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಅವಿಸ್ಮರಣೀಯ ಸಾಧನೆ ಮಾಡಲು ಭಾರತದ ವೇಗಿ ಮೊಹ್ಮದ್ ಶಮಿ ಕೆಲವೇ ಕೆಲವು ಹೆಜ್ಜೆ ದೂರದಲ್ಲಿದ್ದಾರೆ.
ನಾಳೆಯಿಂದ ಭಾರತ – ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆಯುವ ಸಾಧ್ಯತೆಯಿದೆ.
ನಾಳೆ ಆರಂಭವಾಗುವ ಪಂದ್ಯದಲ್ಲಿ ಮೊಹಮ್ಮದ್ ಶಮಿ ಕಣಕ್ಕಿಳಿಯುವುದು ಈಗಾಗಲೇ ಪಕ್ಕಾ ಆಗಿದೆ.
ಮೊಹಮ್ಮದ್ ಶಮಿ ಇದುವರೆಗೆ ಟೀಂ ಇಂಡಿಯಾ ಪರ 51 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 184 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶಮಿ 16 ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಗಳ ಪಟ್ಟಿ ನೋಡಿದ್ರೆ ಮೊದಲ ಸ್ಥಾನದಲ್ಲಿ ಜಂಬೋ ಖ್ಯಾತಿಯ ಕನ್ನಡಿಗ ಅನಿಲ್ ಕುಂಬ್ಳೆ ಇದ್ದಾರೆ.
ಅವರು 619 ವಿಕೆಟ್ ಪಡೆದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕಪಿಲ್ ದೇವ್ ಇದ್ದು, ಅವರು 434 ವಿಕೆಟ್ ಪಡೆದಿದ್ದಾರೆ.
ಹರ್ಭಜನ್ ಸಿಂಗ್ 417 ವಿಕೆಟ್ ಹಾಗೂ ಆರ್. ಅಶ್ವಿನ್ 413 ವಿಕೆಟ್ ಪಡೆದಿದ್ದಾರೆ. ಜಹೀರ್ ಖಾನ್ 311 ವಿಕೆಟ್ ಹಾಗೂ ಇಶಾಂತ್ ಶರ್ಮಾ 306 ವಿಕೆಟ್ ಪಡೆದಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ನಾಳೆಯಿಂದ ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭವಾಗಲಿದೆ.