Shane Warne : ಸರಿಯಾಗಿ ಇದೇ ದಿನ.. ಪ್ರಪಂಚ ಆ ಅದ್ಭುತವನ್ನ ನೋಡಿತ್ತು
1993 ಸರಿಯಾಗಿ ಇದೇ ದಿನ.. ಪ್ರಪಂಚ ಶೇನ್ ವಾರ್ನ್ ಅವರ ಬಾಲ್ ಆಫ್ ದಿ ಸೆಂಚೂರಿಯನ್ನ ನೋಡಿತ್ತು ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿನಲ್, ಆಸ್ಟ್ರೇಲಿಯಾ ದಿಗ್ಗಜ ಬೌಲರ್, ದಿವಂಗತ ಶೇನ್ ವಾರ್ನ್ ಅವರನ್ನ ನೆನಪು ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಟ್ವಿಟ್ಟರ್ ವೇದಿಕೆಯಾಗಿ ಹಂಚಿಕೊಂಡಿದೆ.
1993 ರಲ್ಲಿ ಆಷಸ್ ಸರಣಿ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಗೆ ಪ್ರವಾಸ ಹೋಗಿತ್ತು. ಈ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್ ನಲ್ಲಿನ ಎಮಿರೆಟ್ಸ್ ಒಲ್ಡ್ ಟ್ರಫೋರ್ಡ್ ವೇದಿಕೆಯಾಗಿ ಜೂನ್ ಮೂರರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಯ್ತು.
ಇದರಲ್ಲಿ ಟಾಸ್ ಗೆದ್ದ ಆತಿಥ್ಯೇಯ ಇಂಗ್ಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ತು. ಅದೇ ರೀತಿ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 289 ರನ್ ಗಳಿಗೆ ಆಲೌಟ್ ಮಾಡಿತ್ತು.
ಬಳಿಕ ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ತಂಡದ ಓಪನರ್ ಗ್ರಾಹಾಮ್ ಗೂಚ್ ಶುಭಾರಂಭ ನೀಡಿದರು. 65 ರನ್ ಗಳನ್ನು ಸಿಡಿಸಿ ಮುನ್ನುಗ್ಗುತ್ತಿದ್ದ ಗ್ರಾಹಾಮ್, ಅವರನ್ನ ವಾರ್ನ್ ಪೆವಿಲಿಯನ್ ಕಳುಹಿಸಿದರು.

ಆ ಬಳಿಕ ಎರಡನೇ ದಿನ ಅಂದ್ರೆ ಜೂನ್ ನಾಲ್ಕರಂದು ಒನ್ ಡೌನ್ ನಲ್ಲಿ ಮೈಕ್ ಗಾಟಿಂಗ್ ಅವರನ್ನು ಅದ್ಭುತ ಎಸೆತದ ಶೇನ್ ವಾರ್ನ್ ಅವರು ಮೂಲಕ ಬೋಲ್ಡ್ ಮಾಡಿದರು.
ಚೆಂಡನ್ನ ನೇರವಾಗಿ ಗಾಟಿಂಗ್ ಮುಂದೆ ಹಾಕಿ, ಆಫ್ ವಿಕೆಟ್ ಅನ್ನು ಎಗರಿಸಿದರು. ಅಸಲಿಗೆ ಚೆಂಡು ಎಲ್ಲಿ ಬಿತ್ತೋ ಅನ್ನೋದನ್ನ ಬ್ಯಾಟರ್ ಊಹಿಸಲೂ ಆಗಲಿಲ್ಲ.
ಈ ಚೆಂಡನ್ನ ನೋಡಿದ ಅಂಪೈರ್ ಕೂಡ ಶಾಕ್ ನಲ್ಲಿ ನಿಂತರು. ಇದನ್ನ ಬಾಲ್ ಆಫ್ ದಿ ಸೆಂಚೂರಿ ಎಂದು ವಾರ್ನ್ ಮೇಲೆ ಪ್ರಶಂಸೆಗಳ ಸುರಿಮಳೆಗೈದರು.
ಈ ಪಂದ್ಯದಲ್ಲಿ ವಾರ್ನ್ ಎಂಟು ವಿಕೆಟ್ ಗಳನ್ನು ಪಡೆದುಕೊಂಡರು. ಅಲ್ಲದೇ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅಲ್ಲದೇ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಆಸ್ಟ್ರೇಲಿಯಾ ತಂಡ, ಇಂಗ್ಲೆಂಡ್ ವಿರುದ್ಧ 179 ರನ್ ಗಳೊಂದಿಗೆ ಗೆಲುವು ಸಾಧಿಸಿತ್ತು.








