Shane Watson | ಆತ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೇಲೆ ಆಸೀಸ್ ದಿಗ್ಗಜ ಬ್ಯಾಟರ್ ಶೇನ್ ವಾಟ್ಸನ್ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಟೀಂ ಇಂಡಿಯಾಗೆ ಈ ವರ್ಷ ಟಿ 20 ವಿಶ್ವಕಪ್ ಅನ್ನು ಹಾರ್ದಿಕ್ ಪಾಂಡ್ಯ ಒಂಟಿ ಕೈಯಲ್ಲಿ ಗೆಲ್ಲಿಸಿಕೊಡುತ್ತಾರೆ ಎಂದು ವಾಟ್ಸನ್ ಕೊಂಡಾಡಿದ್ದಾರೆ.
ಇಂಜೂರಿ ಸಮಸ್ಯೆಯಿಂದ ಚೇತರಿಸಿಕೊಂಡು ಟೀಂ ಇಂಡಿಯಾಗೆ ವಾಪಸ್ ಆದ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿ ಕಪ್ ಗೆದ್ದ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾಗೆ ಸ್ಟ್ರಾಂಗ್ ಕಂ ಬ್ಯಾಕ್ ಮಾಡಿದರು.
ಸದ್ಯ ಆಸ್ಟ್ರೆಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ ಗೆ ಟೀಂ ಇಂಡಿಯಾ ತಯಾರಿ ನಡೆಸಿದ್ದು, ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಈ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆ ಜೊತೆ ಶೇನ್ ವಾಟ್ಸನ್ ಮಾತನಾಡಿದ್ದು, ಹಾರ್ದಿಕ್ ಪಾಂಡ್ಯ ತುಂಬಾ ಪ್ರತಿಭಾನ್ವಿತ ಕ್ರಿಕೆಟರ್.
ಆತ 140 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ವಿಧಾನ ಅದ್ಭುತವಾಗಿದೆ. ಆತನಿಗೆ ಮಿಡಲ್ ಔವರ್ ನಲ್ಲಿ ವಿಕೆಟ್ ತೆಗೆಯುವ ತಾಕತ್ತು ಇದೆ.
ಇನ್ನು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಆತ ಪ್ರಸ್ತುತ ಬ್ಯಾಟಿಂಗ್ ನಲ್ಲಿ ಅಬ್ಬರಿಸುತ್ತಿದ್ದಾರೆ. ಹಾರ್ದಿಕ್ ಕೇವಲ ಫಿನಿಷರ್ ಮಾತ್ರವಲ್ಲ, ಪವರ್ ಹಿಟ್ಟರ್ ಕೂಡ.
ಆತನಲ್ಲಿ ಎಲ್ಲಾ ರೀತಿಯ ಸ್ಕಿಲ್ಸ್ ಇವೆ. ಈ ವರ್ಷ ಐಪಿಎಲ್ ನಲ್ಲಿ ಹಾರ್ದಿಕ್ ಪ್ರದರ್ಶನವನ್ನು ನಾವು ನೋಡಿದ್ದೇವೆ.
ಹಾರ್ದಿಕ್ ಹೇಗೆ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದ್ರೋ ಅದೇ ರೀತಿಯಲ್ಲಿ ಇದೀಗ ಟೀಂ ಇಂಡಿಯಾಗೆ ಅವರು ವಿಶ್ವಕಪ್ ಗೆಲ್ಲಿಸಿಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.








