Shankar – ನಿರ್ದೇಶಕ ಶಂಕರ್ ಗೆ ಗೌರವ ಡಾಕ್ಟರೇಟ್ ಪ್ರದಾನ..
ಬಿಗ್ ಬಜೆಟ್ ಸಿನಿಮಾಗಳ ನಿರ್ದೇಶಕ ಅಂತಲೇ ಗರುತಿಸಿಕೊಳ್ಳುವ ಶಂಕರ್ ರೋಬೋ, ಐ, ರೋಬೋ 2.o, ಅನ್ನಿಯನ್ ಚಿತ್ರಗಳ ಮೂಲಕ ಭಾರತೀಯ ಸಿನಿಮಾ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇಂಥಹ ಅದ್ಭುತ ನಿರ್ದೇಶಕನಿಗೆ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ವೇಲ್ಸ್ ವಿಸ್ಟಾಸ್ ಕ್ಯಾಂಪಸ್, ಪಲ್ಲವರಂ. ಆಗಸ್ಟ್ 5 ರಂದು 12 ನೇ ವಾರ್ಷಿಕ ಪದವಿಯನ್ನ ಆಚರಿಸಿತು. ಈ ಸಂದರ್ಭದಲ್ಲಿ ವಿಶ್ವ ವಿದ್ಯಾಲಯ ನಿರ್ದೇಶಕ ಶಂಕರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಚಿತ್ರರಂಗಕ್ಕೆ ಅವರ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಂಕರ್ ಜೊತೆಗೆ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರಿಗೂ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನ ನೀಡಿ ಗೌರವಿಸಿದೆ.
ಇನ್ನೂ ಶಂಕರ್, ಶೀಘ್ರದಲ್ಲೇ ‘ಇಂಡಿಯನ್-2 ಸಿನಿಮಾದ’ ಚಿತ್ರೀಕರಣವನ್ನ ಆರಂಭಿಸಲಿದ್ದಾರೆ. ಈ ಚಿತ್ರ ಅವರ ಹಿಂದಿನ ‘ಇಂಡಿಯನ್’ ಸಿನಿಮಾದ ಮುಂದುವರಿದ ಭಾಗ. ಚಿತ್ರದಲ್ಲಿ ಕಮಲ್ ಹಾಸನ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಕಾಜಲ್ ಅಗರ್ವಾಲ್, ಪ್ರಿಯಾ ಭವಾನಿ ಶಂಕರ್, ರಾಕುಲ್ ಪ್ರೀತ್ ಸಿಂಗ್, ಸಿದ್ಧಾರ್ಥ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಶಂಕರ್ ಈಗಾಗಲೇ ತೆಲುಗಿನ ರಾಮ್ ಚರಣ್ ಜೊತೆ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲವಾದರೂ RC-15 ಎಂದು ಕರೆಯಲಾಗುತ್ತಿದೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದು, ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.
Shankar – Honorary Doctorate presented to tamil Director Shanka