ಶಂಕರ್ – ರಾಮ್ ಚರಣ್ ಪ್ಯಾನ್ ಇಂಡಿಯಾ 3D ಸಿನಿಮಾದ ಪ್ರಮುಖ ಅಪ್ ಡೇಟ್ ರಿವೀಲ್..!
ಟಾಲಿವುಡ್ ನ ಸ್ಟಾರ್ ನಟ ರಾಮಚರಣ್ ಹಾಗೂ ತಮಿಳು ಅಷ್ಟೇ ಅಲ್ದೇ ಭಾರತದ ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಶಂಕರ್ ಅವರ ಕಾಂಬಿನೇಷನ್ ನಲ್ಲಿ ಬಿಗ್ ಬಜೆಟ್ ಸಿನಿಮಾ ಮೂಡಿಬರುತ್ತಿದೆ.. ಇದು ಎಲ್ಲರ ಗೊತ್ತಿರುವ ಹಾಗೂ ಹಳೆಯ ವಿಚಾರ..
ಆದ್ರೆ ಇದೊಂದು 3D ಸಿನಿಮಾ, ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾ ಅನ್ನೋದು ಬಿಟ್ರೆ ಬೇರೆ ಯಾವುದೇ ರೀತಿಯಾದ ಅಪ್ ಡೇಟ್ ಗಳು ಸಿಕ್ಕಿರಲಿಲ್ಲ.. ಸಿನಿಮಾ ಟೈಟಲ್ ಏನು.. ಕಥೆ ಅಥವ ಥೇಮ್ ಏನು.. ರಾಮ್ ಚರಣ್ ಅವರು ಯಾವ ಲುಕ್ ಹಾಗೂ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕ್ಯೂರಿಯಾಸಿಟಿ ಜನರಲ್ಲಿದೆ.
ಅಂದ್ಹಾಗೆ ರಾಮ್ ಚರಣ್ ಈ ಸಿನಿಮಾದಲ್ಲಿ IAS ಅಧಿಕಾರಿಯಾಗಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ ಎನ್ನಲಾಗ್ತಿದೆ. ವ್ಯವಸ್ಥೆಯನ್ನು ಬದಲಾಯಿಸುವ ಪ್ರಾಮಾಣಿಕ ಹಾಗೂ ಖಡಕ್ ಅಧಿಕಾರಿ ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.








