ಓವಲ್ ಅಂಗಳದಲ್ಲಿ ಶಾರ್ದೂಲ್ ಠಾಕೂರ್ ವಿಶೇಷ ಸಾಧನೆ
ಲಂಡನ್ : ಓವಲ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಶಾರ್ದೂಲ್ ಠಾಕೂರ್ ವಿಶೇಷ ಸಾಧನೆ ಮಾಡಿದ್ದಾರೆ.
ಕೇವಲ 31 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ವೇಗದ ಅರ್ಧಶತಕ ಹೊಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಶಾರ್ದೂಲ್ ಠಾಕೂರ್ ಪಾತ್ರವಾದರು.
ಇನ್ನು ಇದಕ್ಕೂ ಮುನ್ನಾ ಟೀಂ ಇಂಡಿಯಾದ ಪರ ವೇಗದ ಅರ್ಧಶತಕ ಹೊಡೆದ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿದೆ. ಕಪಿಲ್ ದೇವ್ 30 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದರು.
ಅಂದಹಾಗೆ ನಾಲ್ಕನೇ ಟೆಸ್ಟ್ ನ ಮೊದಲ ದಿನ ಟೀಂ ಇಂಡಿಯಾ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. ಕೊನೆಯಲ್ಲಿ ತಂಡಕ್ಕೆ ಆಸರೆಯಾದ ಶಾರ್ದೂಲ್ ಟಿ-20 ಪಂದ್ಯದಂತೆ ಬ್ಯಾಟ್ ಬೀಸಿ 57 ರನ್(36 ಎಸೆತ, 7 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.
ಇನ್ನು ಭಾರತ ಮೊದಲ ನ್ನಿಂಗ್ಸ್ ನಲ್ಲಿ 191 ರನ್ ಗಳಿಗೆ ಆಲೌಟ್ ಆಗಿದ್ದರೆ ಇಂಗ್ಲೆಂಡ್ 53 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.