ಬೆಂಗಳೂರು : ನಾಳೆ ಕೇಕ್ ಮುಂತಾದವುಗಳನ್ನು ತರುವ ಹಣದಲ್ಲಿ ಅಗತ್ಯ ಇರುವವರಿಗೆ ಮಾಸ್ಕ್ ಹಾಗೂ ನ್ಯಾನಿಟೈಸರ್ ಗಳನ್ನು ಹಂಚಿ ಎಂದು ಬಚ್ಚೇಗೌಡ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಳೆ ಅಂದರೆ ಅಕ್ಟೋಬರ್ 01 ರಂದು ನನ್ನ ಜನ್ಮ ದಿನವಾಗಿದ್ದು, ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳದಿರಲು ನಿರ್ಧರಿಸಿದ್ದೇನೆ.
ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ ಹಾಗೂ ವೈಯಕ್ತಿಕ ಭೇಟಿಯೂ ಬೇಡವೆಂದು ನಿರ್ಧರಿಸಿದ್ದು, ತಾವುಗಳು ಸಹಕರಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದ್ದು, ಈ ವರ್ಷ ತಾವು ಮನೆಯಿಂದಲೇ ಹರಸಿ ಆಶೀರ್ವಾದಿಸಬೇಕಾಗಿ ಕಳಕಳಿಯ ಮನವಿ.
ಇದನ್ನೂ ಓದಿ : ಮಥುರಾದಲ್ಲಿ ಶ್ರೀ ಕೃಷ್ಣ ದೇಗುಲ ನಿರ್ಮಿಸಲು ಇಂದಿನ ತೀರ್ಪು ಸ್ಫೂರ್ತಿ: ಕೆ.ಎಸ್.ಈಶ್ವರಪ್ಪ
ಹಾಗೆ, ಕೇಕು ಮುಂತಾದವುಗಳನ್ನು ತರುವ ಬದಲು ಅದೇ ಹಣದಲ್ಲಿ ಅಗತ್ಯವಿರುವವರಿಗೆ ಮಾಸ್ಕ್, ಸಾನಿಟೈಜರ್ ವಿತರಿಸುವ ಮೂಲಕ ನನಗೆ ಶುಭಕೋರಬೇಕಾಗಿ ಬಚ್ಚೇಗೌಡರು ವಿನಂತಿಸಿಕೊಂಡಿದ್ದಾರೆ.
ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದ್ದು, ಈ ವರ್ಷ ತಾವು ಮನೆಯಿಂದಲೇ ಹರಸಿ ಆಶೀರ್ವಾದಿಸಬೇಕಾಗಿ ಕಳಕಳಿಯ ಮನವಿ.
ಹಾಗೆ, ಕೇಕು ಮುಂತಾದವುಗಳನ್ನು ತರುವ ಬದಲು ಅದೇ ಹಣದಲ್ಲಿ ಅಗತ್ಯವಿರುವವರಿಗೆ ಮಾಸ್ಕ್, ಸಾನಿಟೈಜರ್ ವಿತರಿಸುವ ಮೂಲಕ ನನಗೆ ಶುಭಕೋರಬೇಕಾಗಿ ವಿನಂತಿ 🙏.
— B.N. Bache Gowda (@BNBachegowda_MP) September 30, 2020