ಡ್ರಗ್ ಕೇಸ್ ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್
ಜೈಲಿನಲ್ಲಿ 22 ದಿನಗಳನ್ನು ಕಳೆದಿದ್ದ ಆರ್ಯನ್ ಖಾನ್
ನಿರಾಳರಾದ ಶಾರುಖ್ ಖಾನ್ , ಆರ್ಯನ್ ಖಾನ್
ನ್ಯಾಯಾಲಯದಲ್ಲಿ ಆರ್ಯನ್ ಪರ ರೊಹಟಗಿ ವಾದ ಮಂಡನೆ
ಬಾಲಿವುಡ್ ನ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಇದೀಗ ಡ್ರಗ್ ಕೇಸ್ ನಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ..
ಕಳೆದ ವರ್ಷ ಮುಂಬೈ ಜೈಲಿನಲ್ಲಿ 22 ದಿನಗಳನ್ನು ಕಳೆದಿದ್ದ ಡ್ರಗ್ಸ್ ಪ್ರಕರಣದ ಎಲ್ಲಾ ಆರೋಪಗಳಿಂದ ಇಂದು ಮುಕ್ತರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಹಿರಿಯ ವಕೀಲ ಮುಕುಲ್ ರೋಹಟಗಿ ಆರ್ಯನ್ ಖಾನ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.. ಅವರಿಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾದ್ರು..
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಆರ್ಯನ್ ಖಾನ್ ದೇಹದಲ್ಲಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಮತ್ತು ಅವರ ಮತ್ತು ಇತರ ಐವರ ವಿರುದ್ಧ ಆರೋಪ ಮಾಡಲು ಯಾವುದೇ “ಸಾಧಾರಣ ಪುರಾವೆ” ಇಲ್ಲ ಎಂದು ಆರೋಪಟ್ಟಿಯಲ್ಲಿ ಹೇಳಲಾಗಿದೆ..
ಇತರ ಹದಿನಾಲ್ಕು ಆರೋಪಿಗಳ ವಿರುದ್ಧ ಡ್ರಗ್ಸ್ ವಿರೋಧಿ ಸಂಸ್ಥೆ ಆರೋಪ ಹೊರಿಸಿದೆ. ಆರ್ಯನ್ ಖಾನ್ ಮತ್ತು ಅವರ ತಂದೆ ಶಾರುಖ್ ಖಾನ್ ಇಬ್ಬರೂ ನಿರಾಳರಾಗಿದ್ದಾರೆ ಎಂದು ಮುಕುಲ್ ರೋಹಟಗಿ ಹೇಳಿದ್ದಾರೆ.