ಅಟ್ಲಿ – ಶಾರುಖ್ ಖಾನ್ ಸಿನಿಮಾದ ಟೈಟಲ್ ಜನವವರಿ 26ಕ್ಕೆ…!!!
ಝೀರೋ ಸಿನಿಮಾ ಇಂಡಸ್ಟ್ರಿಯಲ್ ಪ್ಲಾಪ್ ಆದ ನಂತರ ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಸುಮಾರು 3 ವರ್ಷಗಳ ಕಾಲ ಸಿನಿಮಾಗಳಿಂದ ದೂರವಿದ್ದರು.. ಈಗ ಅವರ ನಟನೆಯ ಹೊಸ ಸಿನಿಮಾಗೆ ಸೌತ್ ಸ್ಟಾರ್ ಡೈರೆಕ್ಟರ್ ಅಟ್ಲಿ ಆಕ್ಷನ್ ಕಟ್ ಹೇಳ್ತಾಯಿರೋ ಸುದ್ದಿ ಎಲ್ರಿಗೂ ಗೊತ್ತೇ ಇದೆ..
ವಿಜಯ್ ಜೊತೆಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿದ ನಂತರ ಅಟ್ಲಿ ಈಗ ಶಾರುಖ್ ಖಾನ್ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.. ಶಾರುಖ್ ಖಾನ್ ಈ ಬಹು ನಿರೀಕ್ಷಿತ ಚಿತ್ರಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡ್ತಿದೆ.. ಅಲ್ಲದೇ ಟೈಟಲ್ ಕ್ಯೂರಿಯಾಸಿಟಿಯೂ ಜನರಲ್ಲಿ ಮನೆ ಮಾಡಿದೆ. ಚಿತ್ರಕ್ಕೆ ‘ಲಯನ್’ ಎಂದು ಹೆಸರಿಡಲಾಗಿದೆ ಎಂಬ ಊಹಾಪೋಹಗಳು ಇವೆ.
ಆದ್ರೆ ನಿಖರವಾಗಿ ಸಿನಿಮಾದ ಟೈಟಲ್ ಏನೂ ಅನ್ನುವುದು ಜನವರಿ 26ಕ್ಕೆ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಬಿ ಟೌನ್ ನಲ್ಲಿ ಸುದ್ದಿ ಹರಿದಾಡ್ತಿದೆ.. ಹೌದು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿರುವ ಈ ಸಿನಿಮಾವು ಆಕ್ಷನ್ ಪ್ಯಾಕ್ಡ್ ಎಂಟರ್‌ಟೈನರ್ ಎಂದು ಹೇಳಲಾಗಿದೆ.
ಶಾರುಕ್ ಚಿತ್ರದಲ್ಲಿ ತಂದೆ ಮತ್ತು ಮಗನ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಲಯನ್’ ಚಿತ್ರದಲ್ಲಿ ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ‘ಲಯನ್’ ಹೊರತುಪಡಿಸಿ, ಶಾರುಖ್ ಖಾನ್ ಇತ್ತೀಚೆಗೆ ಅವರ ಮುಂಬರುವ ಚಿತ್ರ ‘ಪಠಾಣ್’ ಚಿತ್ರೀಕರಣವನ್ನು ಪುನರಾರಂಭಿಸಿದರು.








