ತಿರುವನಂತಪುರಂ: ಭಾರತ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತು ಮಾಡದಿದ್ದಲ್ಲಿ ಅಮೆರಿಕ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಭಾರತದ ವಿರುದ್ಧ ಪ್ರತೀಕಾರದ ಮಾತುಗಳನ್ನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ಕಿಡಿಕಾರಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ರಂಪ್ ಗೆ ತಿರುಗೇಟು ನೀಡಿರುವ ಶಶಿತರೂರ್, “ಜಾಗತಿಕ ವ್ಯವಹಾರಗಳ ಕ್ಷೇತ್ರದ ನನ್ನ ಹಲವು ದಶಕಗಳ ಅನುಭವದಲ್ಲಿ ಒಂದು ರಾಷ್ಟ್ರದ ಮುಖ್ಯಸ್ಥ ಅಥವಾ ಸರ್ಕಾರ ಈ ರೀತಿಯ ಇನ್ನೊಬ್ಬರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದನ್ನು ಕೇಳಿಲ್ಲ. ಭಾರತದ ಹೈಡ್ರಾಕ್ಸಿಕ್ಲೋರೋಕ್ವಿನ್ “ನಮಗೆ ಪೂರೈಸಿ” ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಭಾರತವು ಅದನ್ನು ನಿಮಗೆ ಮಾರಾಟ ಮಾಡಲು ನಿರ್ಧರಿಸಿದಾಗ ಮಾತ್ರವೇ ಅದು ನಿಮ್ಮದಾಗಲಿದೆ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
Never in my decades of experience in world affairs have I heard a Head of State or Govt openly threatening another like this. What makes Indian hydroxychloroquine "our supply", Mr President? It only becomes your supply when India decides to sell it to you. @USAndIndia https://t.co/zvSPEysTNf
— Shashi Tharoor (@ShashiTharoor) April 7, 2020
ಶ್ವೇತಭವನದಲ್ಲಿ ಕೊರೋನಾವೈರಸ್ ಟಾಸ್ಕ್ ಫೋರ್ಸ್ ಬ್ರೀಫಿಂಗ್ ಸಮಯದಲ್ಲಿ ಮಾತನಾಡಿದ ಟ್ರಂಪ್, ಭಾರತ ಕೊರೊನಾ ಸೋಂಕಿನ ಚಿಕಿತ್ಸೆಗೆ ಉಪಯೋಗಿಸಬಹುದಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನ ಅಮೆರಿಕಾಗೆ ರಫ್ತು ಮಾಡದಿದ್ರೆ ಖಂಡಿತವಾಗಿಯೂ ಪ್ರತೀಕಾರ ಇದ್ದೇ ಇರುತ್ತದೆ ಎಂದಿದ್ದಾರೆ.