ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ ಸಾಧ್ಯತೆ…
ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯನ್ನೇ ಕಂಡಿಲ್ಲ, ಈ ಬಾರಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಎಲ್ಲಾ ಸೂಚನೆಗಳಿವೆ. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನವಹಿಸಿಕೊಳ್ಳಲು ನಿರಾಕರಿಸಿದ ನಂತರ ಪಕ್ಷದಲ್ಲಿ ಹಲವು ಹಿರಿಯ ನಾಯಕರ ಹೆಸರು ಕೇಳಿ ಬರುತ್ತಿದೆ. ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮಲಯಾಳಂನ ದಿನಪತ್ರಿಕೆ ‘ಮಾತೃಭೂಮಿ’ಗೆ ‘ ಬರೆದ ಅಂಕಣದಲ್ಲಿ ಮುಕ್ತ ಮತ್ತು ನ್ಯಾಯಯುತ’ ಚುನಾವಣೆಗೆ ಕರೆ ನೀಡಿದ್ದಾರೆ.
ಪಕ್ಷವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ನಿರ್ಧರಿಸಲು ಎಐಸಿಸಿ ಮತ್ತು ಪಿಸಿಸಿ ಪ್ರತಿನಿಧಿಗಳಿಗೆ ಅವಕಾಶ ನೀಡಿದರೆ, ಅಧ್ಯಕ್ಷರ ಆಯ್ಕೆಯನ್ನು ಕಾನೂನುಬದ್ಧಗೊಳಿಸಲು ಮತ್ತು ಪಕ್ಷವನ್ನು ಮುನ್ನಡೆಸಲು ಅವರಿಗೆ ವಿಶ್ವಾಸಾರ್ಹ ಜನಾದೇಶವನ್ನು ನೀಡಲು ಸಹಾಯ ಮಾಡುತ್ತದೆ ಎಂದು ತರೂರ್ ತಿಳಿಸಿದ್ದಾರೆ.
ಪಕ್ಷದೊಳಗೆ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ 2020 ರಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ 23 ನಾಯಕರ ಗುಂಪಿನಲ್ಲಿ ಶಶಿ ತರೂರ್ ಕೂಡ ಒಬ್ಬರಾಗಿದ್ದರು. ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಕಾಂಗ್ರೆಸ್ಗೆ ಅಗತ್ಯವಿರುವ ಪುನರುಜ್ಜೀವನದ ಆರಂಭವಾಗಿದೆ’ ಎಂದು ತಿರುವನಂತಪುರಂನ ಸಂಸದರು ಹೇಳಿದರು.