ಪರಪ್ಪನ ಅಗ್ರಹಾರದಲ್ಲಿ ರಾಜಾತೀತ್ಯ ಪ್ರಕರಣ ಹಿನ್ನೆಲೆ ಶಶಿಕಲಾ ಹಾಗೂ ಇಳವರಸಿಗೆ ಜಾಮೀನು ಮಂಜೂರಾಗಿದೆ. ಶಶಿಕಲಾ ಸೇರಿ ನಾಲ್ವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು , ಜಾಮೀನು ಸಿಕ್ಕಿದೆ..
ಶಶಿಕಲಾ ಹಾಗೂ ಇಳವರಸಿಗೆ ತಲಾ ಐದು ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಷರತ್ತುಗಳ ಮೇಲೆ ಜಾಮೀನು ನೀಡಲಾಗಿದೆ. ನ್ಯಾಯಾಲಯವು ಏಪ್ರಿಲ್ 16 ಕ್ಕೆ ವಿಚಾರಣೆ ಮುಂದೂಡಿದೆ. ನ್ಯಾ. ಲಕ್ಷ್ಮೀನಾರಾಯಣ ಭಟ್ ಆದೇಶ ನೀಡಿದ್ದಾರೆ..
ಜೈಲು ಸಿಬ್ಬಂದಿಗಳಾದ ಗಜರಾಜು ಹಾಗೂ ಸುರೇಶ್ ಕೂಡ ಹಾಜರಾಗಿದ್ದು ಎಲ್ಲಾ ನಾಲ್ವರು ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಹಿನ್ನಲೆ ಕೃಷ್ಣ ಕುಮಾರ್ ಹಾಗೂ ಅನಿತಾ ಕೋರ್ಟ್ ಗೆ ಗೈರಾಗಿದ್ದರು.
ಮುಂದಿನ ವಿಚಾರಣೆ ವೇಳೆ ಹಾಜರಾಗಲು ಆರೋಪಿಗಳಿಗೆ ಸೂಚನೆ ನೀಡಲಾಗಿದೆ.