ಮುಂದೆಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ : ಶಶಿಕಲಾ ಜೊಲ್ಲೆ
ಹಾವೇರಿ : ರಾಜ್ಯದಲ್ಲಿ ಯಡಿಯೂರಪ್ಪ ಅವರೇ ಸಿಎಂ bs-yediyurappa ಆಗಿ ಮುಂದುವರೆಯುತ್ತಾರೆ. ಮುಂದೆಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರುಣ್ ಸಿಂಗ್ ಭೇಟಿ ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
ಮುಂಬರುವ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತದೆ. ಮುಂದೆಯೂ ನಮ್ಮ ಸರ್ಕಾರವೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ, ಮನೆ ಅಂದ್ಮೇಲೆ ಜಗಳ, ವೈಮನಸ್ಸು ಇರುತ್ತವೆ. ಅದರಂತೆ ಪಕ್ಷದಲ್ಲಿ ಏನಾದರೂ ಆಗಿರಬಹುದು.
ಪಕ್ಷದ ಹಿರಿಯರು ಅವುಗಳನ್ನ ಸರಿ ಮಾಡುತ್ತಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬರುತ್ತಿದ್ದಾರೆ.
ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅವುಗಳನ್ನ ಆಲಿಸಿ ಅವರು ಸರಿ ಮಾಡ್ತಾರೆ. ಯಡಿಯೂರಪ್ಪನವರೆ ಸಿಎಂ ಆಗಿ ಮುಂದುವರಿತಾರೆ ಎಂದು ತಿಳಿಸಿದರು.