ಲಾಕ್ ಡೌನ್ ಟೈಮ್ ನಲ್ಲಿ ಸೆಲೆಬ್ರಿಟಿಗಳು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಹಳೆಯ ಫೋಟೋಗಳನ್ನು ಪೋಸ್ಟ್ ಮಾಡಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅಮೋಲ್ ಮಜುಮ್‍ದಾರ್ ಅವರ ಹಳೆಯ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ರು.
ಇದೀಗ ಮತ್ತೊಂದು ಫೋಟೋ ಶಾಸ್ತ್ರಿ ಹಂಚಿಕೊಂಡಿದ್ದಾರೆ. ಅದು ತನ್ನ ಮನೆಯ ಪ್ರೀತಿಯ ಶ್ವಾನಗಳ ಜೊತೆ ಇರುವ ಫೋಟೋ. ಮನೆಯ ಆವರಣದಲ್ಲಿ ಐದು ನಾಯಿಗಳ ಜೊತೆ ಶಾಸ್ತ್ರಿ ಕುಳಿತುಕೊಂಡಿದ್ದಾರೆ. ಈ ಫೋಟೋ ಹೇಗೆ ಇದೆ ಅಂದ್ರೆ ರವಿಶಾಸ್ತ್ರಿ ಶ್ವಾನಗಳಿಗೆ ಟ್ರೈನಿಂಗ್ ಕೊಡುವ ರೀತಿಯಲ್ಲಿದೆ. ಐದು ಶ್ವಾನಗಳು ಶಾಸ್ತ್ರಿಯ ಮಾತುಗಳನ್ನು ಬಹಳ ಕುತೂಹಲದಿಂದ ಕೇಳಿಸಿಕೊಳ್ಳುವಂತಿದೆ. ಅದರ ಜೊತೆಗೆ ರವಿ ಶಾಸ್ತ್ರಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದಾರೆ.
After me being given a dressing down in the social distancing huddle (meeting @ICC regulations), Skipper skipping off for a ground inspection after a light drizzle 🤩🙌🏻 pic.twitter.com/oro2SOhZZI
— Ravi Shastri (@RaviShastriOfc) May 24, 2020
ಅದ್ರಲ್ಲೂ ಒಂದು ಶ್ವಾನಕ್ಕೆ ಕೂಲಿಂಗ್ ಗ್ಲಾಸ್ ಹಾಕೊಂಡು ಆ ಶ್ವಾನಕ್ಕೆ ನಾಯಕ ಅಂತನೂ ಹೇಳಿದ್ದಾರೆ. ಒಟ್ಟಿನಲ್ಲಿ ರವಿ ಶಾಸ್ತ್ರಿ ಲಾಕ್ ಡೌನ್ ಟೈಮ್ ಅನ್ನು ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಕೊರೋನಾ ವೈರಸ್ ನಿಂದ ರವಿಶಾಸ್ತ್ರಿಯೂ ಮನೆಯಲ್ಲೇ ಲಾಕ್ ಆಗಿದ್ದಾರೆ. ಈ ವೇಳೆ ತಮ್ಮ ಹಳೆಯ ಕ್ರಿಕೆಟ್ ದಿನಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.








