ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಹೊಸ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಮೆಗಾಸ್ಟಾರ್ ರ ಹೊಸ ಲುಕ್ ತೆಲುಗು ಸಿನಿಮಾರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಬೋಳು ತಲೆ ಅವತಾರದಲ್ಲಿ ಚಿರು
ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇದ್ದ ಸ್ಟಾರ್ ಗಳು ಉದ್ದ ಗಡ್ಡ, ಕೂದಲು ಬಿಟ್ಟು ಅಭಿಮಾನಿಗಳ ಮುಂದೆ ಬಂದಿದ್ದರೇ, ಮೆಗಾಸ್ಟಾರ್ ಚಿರಂಜೀವಿ ಬೋಳುತಲೆಯಲ್ಲಿ ದರ್ಶನ ಕೊಟ್ಟಿದ್ದಾರೆ. ಬೋಳುತಲೆ ಚಿರಂಜೀವಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 65 ವರ್ಷದ ನಟ ಚಿರಂಜೀವಿ ದಿಢೀರ್ ಲುಕ್ ಬದಲಾಯಿಸಿಕೊಂಡಿದ್ದೇಕೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.
ಕಪ್ಪು ಬಣ್ಣದ ಗಾಗಲ್ ಧರಿಸಿ ಬೋಳುತಲೆಯ ಹೊಸ ಲುಕ್ ನ ಫೋಟೋವನ್ನು ಚಿರಂಜೀವಿ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ‘ಅರ್ಬನ್ ಮಾಂಕ್’ ಎಂದು ಕ್ಯಾಪ್ಷನ್ ನೀಡಿದ್ದಾರೆ.

ನಟ ಚಿರಂಜೀವಿ ಹೊಸ ಲುಕ್ ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ತೆಲುಗು ಸೆಲೆಬ್ರಿಟಿಗಳು ಅಚ್ಚರಿ ಪಡುತ್ತಿದ್ದಾರೆ. ಅಭಿಮಾನಿಗಳು ‘ಬಾಸ್ ಈಸ್ ಬ್ಯಾಕ್’ ಎಂದು ಹೇಳುತ್ತಿದ್ದಾರೆ.
ವೇದಲಂ ರಿಮೇಕ್ ನಲ್ಲಿ ಮೆಗಾಸ್ಟಾರ್
ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿರುವ ಚಿರಂಜೀವಿ, ಈ ಚಿತ್ರದ ಬಳಿಕ ತಮಿಳಿನ ವೇದಲಂ ಸಿನಿಮಾದ ರಿಮೇಕ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ವೇದಲಂನ ರಿಮೇಕ್ ಸಿನಿಮಾದಲ್ಲಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ಚಿರು ಪ್ಲಾನ್ ಮಾಡಿರಬಹುದು.. ಆದ್ರೆ ಸದ್ಯದ ಲುಕ್ ಬಗ್ಗೆ ಚಿರಂಜೀವಿಯೇ ಉತ್ತರ ನೀಡಬೇಕು.








