ಮಹಿಳಾ ದಿನಾಚರಣೆಯ ಪ್ರಯುಕ್ತ ತನ್ನ ಸಾಮಾಜಿಕ ಜಾಲತಾಣ ಖಾತೆಗಳ ಒಂದು ದಿನದ ಜವಾಬ್ದಾರಿಯನ್ನು ಸಾಧಕ ಮಹಿಳೆಗೆ ಬಿಟ್ಟು ಕೊಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಮಹಿಳಾ ದಿನಾಚರಣೆಯಂದು ತನ್ನ ಸಾಮಾಜಿಕ ಜಾಲತಾಣದ ಖಾತೆಯನ್ನು ಮಹಿಳಾ ಸಾಧಕಿಗೆ ಬಳಸಲು ಬಿಟ್ಟು ಅವರಿಗೆ ಗೌರವ ಸಲ್ಲಿಸುವ ನಿರ್ಧಾರ ಪ್ರಧಾನಿಯವರದು. ಈ ಹಿನ್ನೆಲೆಯಲ್ಲಿ ಮೋದಿಯವರು ಜನರಲ್ಲಿ ಅವರಿಗೆ ತಿಳಿದಿರುವ ಮಹಿಳಾ ಸಾಧಕರ ಹೆಸರನ್ನು #SheInspiresUs ಎಂಬ ಹ್ಯಾಶ್ ಟ್ಯಾಗ್ ಬಳಸಿ ಸೂಚಿಸುವಂತೆ ತಿಳಿಸಿದ್ದಾರೆ. ಇದೀಗ ಈ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು, ಎಲ್ಲರೂ ತಮ್ಮ ಮೆಚ್ಚಿನ ಮಹಿಳಾ ಸಾಧಕಿಯರ ಹೆಸರನ್ನು ಸೂಚಿಸುತ್ತಿದ್ದಾರೆ.

ಕನ್ನಡದ ಮಹಿಳಾ ಸಾಧಕಿ ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಸುಧಾಮೂರ್ತಿ ಅವರ ಹೆಸರು #SheInspiresUs ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಬಹಳಷ್ಟು ಟ್ರೆಂಡ್ ಆಗಿದ್ದು, ಸುಧಾಮೂರ್ತಿ ಅವರ ಸಾಮಾಜಿಕ ಸೇವೆ, ಸರಳತೆ, ಸಾಧನೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿವೆ. ಹೀಗಾಗಿ ಅವರು ನಿಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬಳಸುವ ಅರ್ಹತೆ ಹೊಂದಿದ್ದಾರೆ ಎಂದು ನೆಟ್ಟಿಗರು ಪ್ರಧಾನಿಯವರಲ್ಲಿ ಮನವಿ ಮಾಡಿದ್ದಾರೆ.
ಸುಧಾ ಮೂರ್ತಿ ಜೊತೆಗೆ ಇನ್ನೂ ಹಲವು ಮಹಿಳಾ ಸಾಧಕಿಯರ ಹೆಸರನ್ನು ನೆಟ್ಟಿಗರು ಸೂಚಿಸಿದ್ದು ಅವರಲ್ಲಿ ಕಿರಣ್ ಬೇಡಿ, ಪಿ ವಿ ಸಿಂಧು, ಸೈನಾ ನೆಹವಾಲ್, ಮೋರಿ ಕೋಮ್, ಸಾಲು ಮರದ ತಿಮ್ಮಕ್ಕ, ಮಿಷನ್ ಮಂಗಲ್ ಮಹಿಳಾ ವಿಜ್ಞಾನಿಗಳ ಹೆಸರುಗಳು ಪ್ರಮುಖವಾಗಿವೆ.








