ಲಂಡನ್: ವಿಶ್ವವನ್ನೇ ತಲ್ಲಣಗೊಳಿಸಿರುವ ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಜನರು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಬಿಟ್ರನ್ ನ 32 ವರ್ಷದ ಟ್ರೇಸಿ ಕಿಸ್ ಎಂಬ ಮಹಿಳೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ವೀರ್ಯ ಸ್ಮೂಥಿ (ಸ್ಪರ್ಮ್ ಸ್ಮೂಥಿ) ಸೇವಿಸುತ್ತಿದ್ದಾರೆ.
ಟ್ರೇಸಿ ಕಿಸ್ ತನ್ನ ಗೆಳೆಯನಿಂದ ವೀರ್ಯ ಪಡೆದು ಅದನ್ನು ಸ್ಮೂಥಿಯಲ್ಲಿ ಮಿಶ್ರಣ ಮಾಡಿಕೊಂಡು ಕಳೆದ ಮೂರು ವರ್ಷಗಳಿಂದ ಸೇವಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರಿಗೆ ಈವರೆಗೂ ಶೀತ ಅಥವಾ ಜ್ವರ ಕಾಣಿಸಿಕೊಂಡಿಲ್ವಂತೆ. ಟ್ರೇಸಿ ಕಿಸ್ ವಾರಕ್ಕೆ ಮೂರು ಬಾರಿ ಸ್ಪರ್ಮ್ ಸ್ಮೂಥಿ ಕುಡಿಯುತ್ತಾರೆ.
ಈ ಕುರಿತು ಮಾತನಾಡಿರುವ ಟ್ರೇಸಿ ಕಿಸ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾನು ಸಸ್ಯಾಹಾರಿ ವಿಧಾನವನ್ನು ಕಂಡುಕೊಂಡಿದ್ದೇನೆ. ಔಷಧಿಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಸೂಕ್ತವಲ್ಲ. ತಾಯಿಯು ತನ್ನ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡುವುದರಿಂದ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತಾಳೆ. ನಾನು 2017ರಲ್ಲಿ ಸ್ಪರ್ಮ್ ಸ್ಮೂಥಿ ಕುಡಿಯಲು ಆರಂಭಿಸಿದೆ. ಅಂದಿನಿಂದ ನನಗೆ ಶೀತ ಅಥವಾ ಜ್ವರ ಕಾಣಿಸಿಕೊಂಡಿಲ್ಲ. ಮುಖದ ಚರ್ಮವನ್ನು ಮೃದುವಾಗಿಸಲು ವೀರ್ಯವನ್ನು ಹಚ್ಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದಲ್ಲದೆ ಹೆಚ್ಚಿನ ಪೋಷಕಾಂಶ ಮತ್ತು ಪ್ರಯೋಜನಗಳನ್ನು ಪಡೆಯಲು ವೀರ್ಯವನ್ನು ನೇರವಾಗಿ ಸೇವಿಸುವುದು ಉತ್ತಮ. ಆದರೆ ನಾನು ಅದನ್ನು ಫ್ರೀಜರ್ ನಲ್ಲಿ ಐಸ್ ಕ್ಯೂಬ್ ಟ್ರೇನಲ್ಲಿ ಸಂಗ್ರಹಿಸುತ್ತೇನೆ. ಕೆಲವೊಮ್ಮೆ ತಾಜಾ ಹಣ್ಣುಗಳು ಮತ್ತು ಬಾಳೆಹಣ್ಣುಗಳ ಸ್ಮೂತಿ ಜೊತೆಗೆ ವೀರ್ಯ ಮಿಶ್ರಣ ಮಾಡಿಕೊಂಡು ಕುಡಿಯುತ್ತೇನೆ. ಇದು ವಿವಿಧ ರೀತಿಯ ರುಚಿಕೊಡುತ್ತದೆ ಎಂದು ತಿಳಿಸಿದ್ದಾರೆ ಟ್ರೇಸಿ ಕಿಸ್.
ನೀವು ಗಂಟಲು ನೋವು ಕಾಣಿಸಿಕೊಂಡಾಗ ಕುಡಿಯುವ ಜೇನುತುಪ್ಪ ಮತ್ತು ನಿಂಬೆ ರಸಕ್ಕಿಂತ ಸ್ಪರ್ಮ್ ಸ್ಮೂಥಿ ಭಿನ್ನವಾಗಿರುವುದಿಲ್ಲ. ಇದು ಮತ್ತೊಂದು ನೈಸರ್ಗಿಕ ಔಷಧಿಯಾಗಿದೆ. ಆದರೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಎಂದಿರುವ ಟ್ರೇಸಿ ಕಿಸ್, ಕೊರೊನಾ ವೈರಸ್ ಗೆ ಇಲ್ಲಿಯವರೆಗೆ ಯಾರೂ ಔಷಧಿ ಕಂಡು ಹಿಡಿದಿಲ್ಲ. ವಿವಿಧ ಪ್ರಯೋಗಾಲಯದಲ್ಲಿ ಔಷಧಿ ಕಂಡು ಹಿಡಿಯುವ ಕಾರ್ಯ ನಡೆಯುತ್ತಿದೆ. ವೀರ್ಯ ಸೇವಿಸುವುದರಿಂದ ಕೋವಿಡ್ 19 ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.








